×
Ad

ಬಸ್ ನಿಂದ ಬಿದ್ದು ಪ್ರಾಯಾಣಿಕ ಮೃತ್ಯು

Update: 2017-12-01 18:02 IST

ಬೆಂಗಳೂರು, ಡಿ.1: ಬಿಎಂಟಿಸಿ ಬಸ್ ತಿರುವು ಪಡೆಯುತ್ತಿದ್ದಾಗ ಇಳಿಯಲು ಮುಂದಾದ ಪ್ರಾಯಾಣಿಕರೋರ್ವರು ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ, ಬಸ್ ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಇಲ್ಲಿನ ಇಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಅತ್ತಿಬೆಲೆ ನಿವಾಸಿ ನಾರಾಯಣಪ್ಪ(65) ಮೃತಪಟ್ಟವರು ಎಂದು ಪೊಲೀಸರು ಗುರುತಿಸಿದ್ದಾರೆ.

ಕೆಂಗೇರಿಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಸಂಜೆ 5:30ರಲ್ಲಿ ಇಲೆಕ್ಟ್ರಾನಿಕ್ ಸಿಟಿಯ 1ನೆ ಹಂತದ ಎನ್‌ಟಿಟಿಎಫ್ ಗೇಟ್ ಬಳಿ ತಿರುವು ಪಡೆಯುತ್ತಿದ್ದಾಗ ಬಸ್‌ನಲ್ಲಿದ್ದ ನಾರಾಯಣಪ್ಪ ಇಳಿಯಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ಬಿದ್ದ ಪರಿಣಾಮ ಚಕ್ರಕ್ಕೆ ಸಿಕ್ಕಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಇಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News