×
Ad

ಡಿ.3ರಂದು ಕಬ್ಬನ್ ಪಾರ್ಕ್‌ನಲ್ಲಿ ವಿಶೇಷ ಕಾರ್ಯಕ್ರಮ

Update: 2017-12-01 22:08 IST

ಬೆಂಗಳೂರು, ಡಿ.1: ನಗರದ ಕಬ್ಬನ್ ಪಾರ್ಕ್‌ನಲ್ಲಿ ವಾರದ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ಪಾರ್ಕ್‌ನಲ್ಲಿರುವ ಚಾಮರಾಜೇಂದ್ರ ಒಡೆಯರ್ ಪ್ರತಿಮೆಯ ಹತ್ತಿರ ಡಿ.3ರಂದು ದ ಹಿಂದೂ ಗ್ರೂಪ್ ವತಿಯಿಂದ ಸೈಕಲ್ ಡೇ ಹಾಗೂ ಜುಂಬಾ, ಸೈಕಲ್ ರ್ಯಾಲಿ ಮತ್ತು ಓದುವ ಜೋನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕ ರಜಾ ದಿನದ ಅಂಗವಾಗಿ ರವಿವಾರ ಕಬ್ಬನ್ ಪಾರ್ಕ್‌ನ ಒಳರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಉದ್ಯಾನವನದ ಆವರಣದಲ್ಲಿ ಸಾರ್ವಜನಿಕರು, ಪ್ರವಾಸಿಗರು ಮತ್ತು ನಡಿಗೆದಾರರ ಅನುಕೂಲಕ್ಕಾಗಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಹಮ್ಮಿಕೊಳ್ಳಲಾಗುತ್ತದೆ.

ಬ್ಯಾಂಡ್ ಸ್ಟಾಂಡ್ ಆವರಣದಲ್ಲಿ: ಬೆಳಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಉದ್ಯಾನವನದಲ್ಲಿ ಉದಯರಾಗ ಶೀರ್ಷಿಕೆಯಡಿ ಎಸ್.ಶಾಂತರಾಜು ಮತ್ತು ತಂಡದಿಂದ ಜಾನಪದ ಗೀತೆ, ಬೆ.8 ರಿಂದ ಸಂಜೆ 5.ರವರೆಗೆ ಉದ್ಯಾನವನದಲ್ಲಿರುವ ಒಳರಸ್ತೆಗಳಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯರವರ ಸಹಯೋಗದೊಂದಿಗೆ ಬಾಡಿಗೆ ರಹಿತ ಸೈಕಲ್ ಸವಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆ.7 ಗಂಟೆಯಿಂದ 8 ಗಂಟೆಯವರೆಗೆ ಯೂನಿವರ್ಸ್ ಆರ್ಟ್ ಫೌಂಡೇಶನ್ ಸಂಸ್ಥೆಯ ಸಹಯೋಗದೊಂದಿಗೆ ಶೇಖರ್ ಡ್ಯಾನ್ಸ್ ಅಕಾಡೆಮಿ ವತಯಿಂದ ಭರತನಾಟ್ಯ, ಬೆ.8 ಗಂಟೆಯಿಂದ 9 ರವರೆಗೆ ವಾಣಿ ವಿದ್ಯಾ ಕೇಂದ್ರದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5 ಗಂಟೆಯಿಂದ 6ರವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಉದ್ಯಾನವನದಲ್ಲಿ ಸಂಧ್ಯಾರಾಗ ಶೀರ್ಷಿಕೆಯಡಿ ಹೊಳಸಾಲಯ್ಯ ಮತ್ತು ತಂಡದಿಂದ ಜಾನಪದ ಗೀತೆ ಕಾರ್ಯಕ್ರಮ ನಡೆಯಲಿದೆ.

ಚಾಮರಾಜೇಂದ್ರ ಒಡೆಯರ್ ಪ್ರತಿಮೆಯ ಬಳಿ: ಬೆ.7 ರಿಂದ 11 ರವರೆಗೆ ಫೋರ್ಟಿಸ್ ಹಾಸ್ಪಿಟಲ್ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉತ್ತಮ ಆರೋಗ್ಯಕ್ಕಾಗಿ ಉಚಿತ ಸಲಹೆಯನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದ್ಯಾನವನದ ಒಳರಸ್ತೆಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ಮತ್ತು ವಯೋವೃದ್ಧರ ಅನುಕೂಲಕ್ಕಾಗಿ ಎರಡು ಸಂಖ್ಯೆಯ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಸೇವೆಯನ್ನು ನಿಗದಿತ ಶುಲ್ಕ ನೀಡಿ ಸಾರ್ವಜನಿಕರು ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News