ಭಾರತ-ಪಾಕ್ ಮಧ್ಯೆ ಯುದ್ಧ ಆರಂಭ

Update: 2017-12-02 18:54 GMT

*1971: ಬಾಂಗ್ಲಾ ವಿಮೋಚನೆಗಾಗಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಇಂದು ಯುದ್ಧ ಆರಂಭಗೊಂಡಿತು. ಈ ಮೊದಲು ಪಾಕಿಸ್ತಾನದೊಂದಿಗೆ ಇದ್ದ ಬಾಂಗ್ಲಾ, ಪೂರ್ವ ಪಾಕಿಸ್ತಾನದ ಪ್ರದೇಶವಾಗಿತ್ತು. ಬಾಂಗ್ಲಾ ವಿಮೋಚನಾ ಹೋರಾಟಗಾರರು ಬಾಂಗ್ಲಾ ಸ್ವಾತಂತ್ರಕ್ಕಾಗಿ ಭಾರತದ ನೆರವು ಯಾಚಿಸಿದಾಗ ಭಾರತ ಯುದ್ಧದಲ್ಲಿ ಭಾಗವಹಿಸಬೇಕಾಯಿತು. ಅಂತಿಮವಾಗಿ ಡಿ.16ರಂದು ಪಾಕಿಸ್ತಾನ ಭಾರತಕ್ಕೆ ಶರಣಾಗುವುದರೊಂದಿಗೆ ಯುದ್ಧ ಕೊನೆಗೊಂಡಿತು. ಬಾಂಗ್ಲಾ ಸ್ವತಂತ್ರವಾಯಿತು.

*1926: ಖ್ಯಾತ ಪತ್ತೆದಾರಿ ಕಾದಂಬರಿಗಾರ್ತಿ ಇಂಗ್ಲೆಂಡ್‌ನ ಅಗಥಾ ಕ್ರಿಸ್ಟೀ 11 ದಿನಗಳವರೆಗೆ ನಿಗೂಢವಾಗಿ ಕಣ್ಮರೆಯಾದರು.
*1930: ಬೆಲ್ಝಿಯಂನ ಮ್ಯೂಸ್ ವ್ಯಾಲಿ ಎಂಬಲ್ಲಿ ವಾಯುಗಾಮಿ ರಾಸಾಯನಿಕಗಳು ದಟ್ಟ ಮಂಜಿನೊಂದಿಗೆ ಸೇರಿಕೊಂಡು ವಿಷಾನಿಲ ಉಂಟಾಗಿ 60 ಜನ ಸಾವಿಗೀಡಾದರು.
*1965: ಸೋವಿಯತ್ ರಷ್ಯಾ ಲೂನಾ 8 ಉಪಗ್ರಹವನ್ನು ಉಡಾವಣೆ ಮಾಡಿತು. ಇದು ಚಂದ್ರನ ಮೇಲ್ಮೈ ಮೇಲೆ ಪತನವಾಯಿತು.
*1967: ವಿಶ್ವದ ಪ್ರಥಮ ಮಾನವ ಹೃದಯ ಕಸಿಯು ದ.ಆಫ್ರಿಕಾದಲ್ಲಿ ಡಾ. ಕ್ರಿಶ್ಚಿಯನ್ ಬರ್ನಾರ್ಡ್‌ರಿಂದ ನೆರವೇರಿಸಲ್ಪಟ್ಟಿತು.
* 1989: ಸೋವಿಯತ್ ರಷ್ಯಾ ಅಧ್ಯಕ್ಷ ಗೋರ್ಬಚೆವ್ ಮತ್ತು ಅಮೆರಿಕದ ಜಾರ್ಜ್ ಎಚ್.ಡಬ್ಲೂ ಬುಷ್ ಶೀತಲ ಸಮರ ಕೊನೆಯಾಗಿರುವುದಾಗಿ ಘೋಷಿಸಿದರು.
*1889: ಮಹಾನ್ ಕ್ರಾಂತಿಕಾರಿ ಬಂಗಾಳದ ಖುದಿರಾಮ್ ಬೋಸ್ ಜನ್ಮದಿನ ಇಂದು.
*1979: ಹಾಕಿ ದಂತಕಥೆ ಭಾರತದ ಮೇಜರ್ ಧ್ಯಾನ್‌ಚಂದ್ ಇಂದು ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ