×
Ad

ಮಾತುಕೃತಿ ಒಂದಾದ ಭಾಷೆ ಕನ್ನಡ: ಎಸ್.ಪಿನಾಕಪಾಣಿ

Update: 2017-12-03 19:07 IST

ಬೆಂಗಳೂರು, ಡಿ.3: ಆಡುವ ಮಾತನ್ನು ಬರವಣಿಗೆಯಲ್ಲಿ ಮೂಡಿಸಿ ಮಾತುಕೃತಿ ಒಂದಾದ ಭಾಷೆ ಕನ್ನಡ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ಹೇಳಿದ್ದಾರೆ.

ರವಿವಾರ ಸಿ.ಎ. ಕಟ್ಟಡದಲ್ಲಿ ಸನ್ನಿಧಿತ ಲೆಖ್ಖಿಗರ ಸಂಸ್ಥೆ ಆಯೋಜಿಸಿದ್ದ ಕಲಾಕೃತಿ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾವಿರಾರು ಭಾಷೆಗಳ ಈ ಜಗತ್ತಿನಲ್ಲಿ ಕೆಲವೇ ಕೆಲವು ಭಾಷೆಗಳಲ್ಲಿ ಮಾತ್ರ ನುಡಿದದ್ದನ್ನು ಬರೆಯಲು ಸಾಧ್ಯವಿದ್ದು, ಕನ್ನಡ ಅಂತಹ ಅಪರೂಪದ ಭಾಷೆಯಾಗಿದೆ, ಕನ್ನಡಿಗರೂ ಸಹ ನುಡಿ ನಡೆಯಲ್ಲಿ ಒಂದಾಗಿ ಎಲ್ಲವನ್ನೂ ಉದಾರವಾಗಿ ಬಿಟ್ಟುಕೊಡುವ ಪ್ರವೃತ್ತಿ ಬೆಳೆಸಿಕೊಂಡಿರುವುದೇ ರಾಜಧಾನಿಯಲ್ಲಿ ಕನ್ನಡ ಕಣ್ಮರೆಗೆ ಕಾರಣವಾಗಿದೆ ಎಂದು ವಿಷಾದಿಸಿದರು.

ಹಲ್ಮಿಡಿ ಶಾಸನದಿಂದ ಆರಂಭವಾಗುವ ಕನ್ನಡ ಭಾಷೆ ಇಂದು ಎಲ್ಲವನ್ನೂ ಸ್ವೀಕರಿಸಿ ಬೆಳೆದಿದೆ. ಪಂಪನಿಂದ ಇಂದಿನ ಫೇಸ್‌ಬುಕ್‌ಗಳವರೆಗೆ ಕನ್ನಡ ಕಾವ್ಯ ಪರಂಪರೆ ಹರಡಿದೆ. ವಿಶ್ವಕ್ಕೆ ಮಾದರಿಯಾದ ಚಳವಳಿಯನ್ನು ನೀಡಿದ ಹಿರಿಮೆ ಕನ್ನಡದ್ದಾಗಿದೆ. ವಿಶ್ವದ ಮೊಟ್ಟಮೊದಲ ಪಾರ್ಲಿಮೆಂಟ್ ಎಂದು ಬಣ್ಣಿಸುವ ಅನುಭವ ಮಂಟಪ ನಮ್ಮದಾಗಿದೆ. ವಚನ ಚಳವಳಿಯಲ್ಲಿ ಮಾರ್ಕ್ಸ ಲೆನಿನ್, ಸೊಯಾಲಿಸಂ ಎಲ್ಲವೂ ಸೇರಿದೆ. ಭಕ್ತಿಯ ಸಿರಿಬೆಳೆ ದಾಸ ಸಾಹಿತ್ಯದಲ್ಲಿ ಹರಡಿದೆ. ಕುವೆಂಪುಗಿಂತ ವಿಶ್ವ ಾನವ ಬೇರಿಲ್ಲ ಎಂದು ಬಣ್ಣಿಸಿದರು.

ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಭಾಷೆ ಮತ್ತು ಸಂಸ್ಕೃತಿಯ ದೃಷ್ಠಿಯಿಂದ ಉತ್ತಮ ಬೆಳವಣಿಗೆ ಎಂದು ಹೇಳಿದ ಅವರು, ಕಲಾಕೃತಿ ಎಂದು ಶೀರ್ಷಿಕೆಯಿಟ್ಟು ಅದರಲ್ಲಿ ಸಿಎ ಬಂಧುಗಳೇ ಸಂಗೀತವನ್ನು, ಚರ್ಚಾಗೋಷ್ಠಿಯನ್ನು, ಹಾಸ್ಯ ಭಾಷಣವನ್ನು, ತಾಳಮದ್ದಲೆಯನ್ನು ನಡೆಸಿಕೊಡುತ್ತಿರುವುದು ಸ್ವಾಗತಾರ್ಹವಾದುದು ಎಂದು ಪ್ರಶಂಸಿದರು.

ಅತಿಥಿಯಾಗಿ ಮಾತನಾಡಿದ ದಕ್ಷಿಣ ಭಾರತ ಸನ್ನಿಧಿತ ಲೆಖ್ಖಿಗರ ಸಂಸ್ಥೆಯ ಅಧ್ಯಕ್ಷ ಕೊತಾ ಶ್ರೀನಿವಾಸ್ ಅವರು ಕನ್ನಡ ಎಂದರೇನು ಎಂದು ನಾವು ಪ್ರಶ್ನೆ ಹಾಕಿಕೊಂಡು, ಅದು ಕೇವಲ ಭಾಷೆ ಮಾತ್ರವಲ್ಲ ಅದು ಸಂಸ್ಕೃತಿಯ ಪ್ರತಿರೂಪವೂ ಹೌದು ಎಂದು ಹೇಳಿದರು.

ಬೆಂಗಳೂರು ನಗರ ಸಿ.ಎ. ಅಸೋಸಿಯೇಷನ್ ಅಧ್ಯಕ್ಷೆ ಎ.ಬಿ. ಗೀತಾ ಮಾತನಾಡಿ, ಮುಂದಿನ ದಿನಗಳಲ್ಲಿ ಹೆಚ್ಚೇಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಥೆಯಿಂದ ನಡೆಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಖಜಾಂಚಿ ರವೀಂದ್ರ ಕೋರೆ, ಕಾರ್ಯದರ್ಶಿ ಶಿವರಾಮಭಟ್ಟ, ಉಪಾಧ್ಯಕ್ಷ ಶ್ರವಣ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News