ಡಿ.8ರಿಂದ 10ರವರೆಗೆ ಬೆಂಗಳೂರಿನಲ್ಲಿ ‘ಕನ್ನಡತಿ ಉತ್ಸವ’
ಬೆಂಗಳೂರು, ಡಿ.4: ‘ಅವಳ ಹೆಜ್ಜೆ’ ತಂಡವು ಡಿ.8ರಿಂದ 10ರವರೆಗೆ ‘ಕನ್ನಡತಿ ಉತ್ಸವ’ ಎಂಬ ವಿನೂತನ ಕಾರ್ಯಕ್ರಮವನ್ನು ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್‌ನ ವಿಸ್ಮಯ ಗ್ಯಾಲರಿಯಲ್ಲಿ ಆಯೋಜಿಸಿದೆ.
ವರ್ಣಚಿತ್ರ, ಕವಿತೆ, ಲೇಖನ ಮತ್ತು ಪುಸ್ತಕಗಳ ಪ್ರದರ್ಶನ, ಕಿರುಚಲನಚಿತ್ರಗಳು, ನೇರ ಪ್ರದರ್ಶನಗಳು ಮತ್ತು ಸಂವಾದವನ್ನು ಒಳಗೊಂಡ ‘ಕನ್ನಡತಿ ಉತ್ಸವ’ ಮೂರು ದಿನಗಳ ಕಾಲ ಪೂರ್ವಾಹ್ನ 11ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಡಿ.8ರಂದು ಪೂರ್ವಾಹ್ನ 11ಕ್ಕೆ ಖ್ಯಾತ ಕವಿ ಮತ್ತು ಅಭಿನೇತ್ರಿ ಪದ್ಮಾವತಿ ರಾವ್ ಉದ್ಘಾಟಿಸುವರು. ಥ್ರೋಬಾಲ್ ಭಾರತೀಯ ತಂಡದ ನಾಯಕ ಕೃಪಾ ಪ್ರಸಾದ್ ಭಾಗವಹಿಸುವರು.
ಕಾರ್ಯಕ್ರಮಕ್ಕೆ ಪ್ರವೇಶಾತಿ ಉಚಿತವಾಗಿರುತ್ತದೆ.
ಡಿಸೆಂಬರ್ 8
► 12 ಗಂಟೆ: ‘ಉದ್ಯಮಿಗಳ ಜಗತ್ತು’ ಎಂಬ ವಿಷಯದಲ್ಲಿ ಸಂವಾದ,
► 2 ಗಂಟೆ: ಸಾಕ್ಷಚಿತ್ರ: ಸ್ತ್ರೀ ನಾಟಕ ಮಂಡಳಿ ಬಗ್ಗೆ ದಿ. ಪ್ರೇಮಾ ಕಾರಂತ್
► 5 ಗಂಟೆ: ಕುಡಿತಿನಿಯ ಅಕ್ಕ ನಾಗಮ್ಮರಿಂದ ಜನಪದ ಸಂಗೀತ.
ಡಿಸೆಂಬರ್ 9
► 12 ಗಂಟೆ: ಸಾಕ್ಷ್ಯಚಿತ್ರ: ‘ಸಾಂಗ್ ಆಫ್ ದಿ ಸೈಕಿ’ ವಿಮೋಚನಾ ಸಂಸ್ಥೆ
► 3 ಗಂಟೆ: ಸಂವಾದ: ‘ಪಕ್ಷಗಳನ್ನು ಮೀರಿದ ರಾಜಕೀಯ’
► 5 ಗಂಟೆ: ಜಿ.ಎಸ್.ಶಾರದಾರಿಂದ ಜಾದೂ ಪ್ರದರ್ಶನ
ಡಿಸೆಂಬರ್ 10
► 11:30 ಗಂಟೆ: ‘ರಕ್ತಾಕ್ಷಿ’ ಯ ಒಂದು ಅಂಕ ದೀಪದ ಮಲ್ಲಿಯವರಿಂದ
► 12 ಗಂಟೆ: ಸಂವಾದ : ಮಾರ್ಗದರ್ಶಕರನ್ನು ಹುಡುಕುತ್ತಾ...
► 2 ಗಂಟೆ: ಸಾಕ್ಷಚಿತ್ರ: ಕಾಲುವೆಯಾ ಕಾಲ ನೃತ್ಯದರ್ಪಣ
► 5 ಗಂಟೆ: ರಂಗಲಕ್ಷ್ಮೀಯವರಿಂದ ಹಾಸ್ಯ ಪ್ರದರ್ಶನ