×
Ad

ಡಿ.23 ರಂದು ಥೀಮ್ ಪಾರ್ಕ್ಸ್ ಉದ್ಘಾಟನೆ

Update: 2017-12-05 19:27 IST

 ಬೆಂಗಳೂರು, ಡಿ. 5: ಕೇರಳದ ವೈನಾಡ್‌ನಲ್ಲಿ ನಡೆಯುತ್ತಿರುವ ಇ3 ಥೀಮ್ ಪಾರ್ಕ್ಸ್ ಫನ್‌ನಲ್ಲಿ ಭಾಗವಹಿಸಲು ನಗರದ ಮಾಹಿತಿ ನೀಡಲು ಕೋರಮಂಗಲದಲ್ಲಿ ಥೀಮ್ ಪಾರ್ಕ್ಸ್ ಶಾಖೆಯನ್ನು ಡಿ.23 ರಂದು ಉದ್ಘಾಟನೆ ಮಾಡಲಾಗುತ್ತ್ತಿದೆ.

  ಹಾಗೆಯೇ ಈ ಶಾಖೆಯಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷ ಆಚರಣೆ ಮಾಡಲಾಗುತ್ತದೆ. ವೈನಾಡ್‌ನಲ್ಲಿ ನಡೆಯುತ್ತಿರುವ ಇ3 ಥೀಮ್ ಪಾರ್ಕ್ಸ್ ಫನ್‌ನಲ್ಲಿ ಭಾಗವಹಿಸಲು ಮಾಹಿತಿ ನೀಡಲಾಗುತ್ತದೆ ಎಂದು ಶಾಖೆಯ ಮುಖ್ಯಸ್ಥ ವೈ.ಎನ್.ಅನಿಲ್ ಕುಮಾರ್ ತಿಳಿಸಿದ್ದಾರೆ.

 ನಗರದ ಜನತೆಗೆ ಪರಿಸರ, ಶಿಕ್ಷಣ ಹಾಗೂ ಮನರಂಜನೆ ನೀಡಲು ವೈನಾಡ್‌ನಲ್ಲಿ ಫನ್ ಆಯೋಜಿಸಲಾಗಿದೆ. ಇಲ್ಲಿ 230 ಕ್ಕೂ ಹೆಚ್ಚು ಪಕ್ಷಿಗಳ ಕುರಿತು ಮಾಹಿತಿ ಸಿಗಲಿದೆ. ಹಾಗೆಯೇ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಬಗ್ಗೆ ಪರಿಚಯಿಸಲಾಗುತ್ತದೆ. ಮಕ್ಕಳು ಆಟವಾಡಲು ಎಲ್ಲ ಆಟಿಕೆಗಳು ಇಲ್ಲಿ ಇರಲಿವೆ. ಬೋಟಿಂಗ್, ಕಾರ್ ರೇಸಿಂಗ್ ಮುಂತಾದ ಸ್ಪರ್ಧೆಗಳು ನಡೆಯಲಿವೆ. ಕೊಳದಲ್ಲಿ ಬಾತುಕೋಳಿಗಳ ಈಜಾಟ ಹಾಗೂ ಮತ್ಸಪ್ರದರ್ಶನ ಇರಲಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಹಲವು ರೀತಿಯ ನಿಸರ್ಗ ಕುರಿತು ಮಾಹಿತಿ ನೀಡುವ ಪ್ರದರ್ಶನಗಳು ಇರಲಿವೆ ಎಂದರು.

 ಇದರಲ್ಲಿ ಭಾಗವಹಿಸಲು ವಯಸ್ಕರರಿಗೆ 450 ರೂ.ಮತ್ತು ಮಕ್ಕಳಿಗೆ 350 ರೂ. ನೋಂದಣಿ ಶುಲ್ಕ ನಿಗದಿ ಪಡಿಸಲಾಗಿದೆ. ವರ್ಷ ಪೂರ್ತಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News