5 ಕೆಜಿ ಚಿನ್ನದ ಬಂಪರ್ ಬಹುಮಾನ ಪಡೆದ ಮಂಗಳೂರಿನ ಜಾಕ್ವೆಲಿನ್ ಕ್ಯಾರೋಲಿನಾ
ಬೆಂಗಳೂರು, ಡಿ. 5: 2017ರ ದೀಪಾವಳಿ ಹಬ್ಬದ ಅಂಗವಾಗಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ತನ್ನ ಗ್ರಾಹಕರಿಗೆ ಏರ್ಪಡಿಸಿದ್ದ ಬಹುಮಾನ ಯೋಜನೆಯಲ್ಲಿ ವಿಜೇತರಾದ ಅದೃಷ್ಠಶಾಲಿ ಮಂಗಳೂರಿನ ಜಾಕ್ವೆಲಿನ್ ಕ್ಯಾರೋಲಿನಾ ಅವರಿಗೆ ಬಾಲಿವುಡ್ ತಾರೆ ತಮನ್ನಾ ಭಾಟಿಯಾ 5 ಕೆಜಿ ಚಿನ್ನದ ಬಂಪರ್ ಬಹುಮಾನ ವಿತರಿಸಿದರು.
ಬೆಂಗಳೂರಿನ ಜೆ.ಡಬ್ಲ್ಯೂ. ಮ್ಯಾರಿಯಟ್ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಅಧ್ಯಕ್ಷ ಎಂ.ಪಿ. ಅಹ್ಮದ್, ವ್ಯವಸ್ಥಾಪಕ ನಿರ್ದೇಶಕ (ಇಂಡಿಯಾ ಆಪರೇಷನ್) ಒ. ಆಶರ್ ಮತ್ತು ಝೋನಲ್ ಹೆಡ್ ಇಫ್ಲು ರಹ್ಮಾನ್ ಉಪಸ್ಥಿತರಿದ್ದರು.
ದೇಶಾದ್ಯಂತ ಇರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶೋರೂಂಗಳಲ್ಲಿ ಚಿನ್ನ ಮತ್ತು ಡೈಮಂಡ್ ಆಭರಣಗಳನ್ನು ಖರೀದಿಸಿದ ಗ್ರಾಹಕರನ್ನು ಲಕ್ಕಿ ಡ್ರಾ ಮೂಲಕ ವಿಜೇತರಾಗಿ ಆಯ್ಕೆ ಮಾಡಲಾಯಿತು. ಜಾಕ್ವೆಲಿನ್ ಕ್ಯಾರೋಲಿನಾ ಅವರ ಲಕ್ಕಿ ಕೂಪನ್ ನಂಬರ್ 14748 ಗೆ ಬಂಪರ್ ಬಹುಮಾನ ಲಭಿಸಿತು.
ಜಾಕುಲಿನ್ ಅವರು ಮಂಗಳೂರಿನ ಶೋರೂಂನಲ್ಲಿ ಚಿನ್ನಾಭರಣ ಖರೀದಿಸಿದ್ದರು. ಇದಲ್ಲದೆ ವಾರದ ಲಕ್ಕಿ ಡ್ರಾಗಳು ಮತ್ತು ಸ್ಕ್ರಾಚ್ ಕಾರ್ಡ್‌ಗಳು ಮತ್ತು ಶೋರೂಂಗಳಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ 11 ಕೆಜಿಯಷ್ಟು ಚಿನ್ನವನ್ನು ಬಹುಮಾನವನ್ನಾಗಿ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಗ್ರೂಪ್ ಚೆಯರ್ಮ್ಯಾನ್ ಎಂ.ಪಿ. ಅಹ್ಮದ್, ನಾವು ನಮ್ಮ ಗ್ರಾಹಕರಿಗೆ ಅವರ ಹಣಕ್ಕೆ ತಕ್ಕ ರೀತಿಯಲ್ಲಿ ಚಿನ್ನಾಭರಣಗಳನ್ನು ಪೂರೈಸಲು ಬದ್ಧರಾಗಿದ್ದೇವೆ. ಗ್ರಾಹಕರಿಗೆ ವಿಶ್ವದರ್ಜೆಯ ಆಭರಣಗಳನ್ನು ನೀಡಲು ನಾವು ಸದಾ ಉತ್ಸುಕರಾಗಿರುತ್ತೇವೆ ಎಂದು ತಿಳಿಸಿದರು.