×
Ad

ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳನ್ನು ಜನ್ನಸೇಹಿಯಾಗಿಸಲು ಡಿಜಿ ಆದೇಶ

Update: 2017-12-05 21:21 IST

ಬೆಂಗಳೂರು, ಡಿ.5: ಕರ್ನಾಟಕದ ಎಲ್ಲ ಪೊಲೀಸ್ ಠಾಣೆಗಳನ್ನು ಜನಸ್ನೇಹಿಯಾಗಿ ಡಿ.31ರೊಳಗೆ ಮಾರ್ಪಡು ಮಾಡಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರಕಾರ ಜಾರಿಗೊಳಿಸಿರುವ ‘ಜನಸ್ನೇಹಿ ಪೊಲೀಸ್’ ಯೋಜನೆಯನ್ನು ಡಿ.31ರೊಳಗೆ ಎಲ್ಲ ಠಾಣೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದು, ಆದೇಶದ ಪ್ರತಿಯನ್ನು ಎಲ್ಲ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ರವಾನಿಸಿದ್ದಾರೆ.

ಈ ಯೋಜನೆ ಜಾರಿಗೆ ರಾಜ್ಯ ಸರಕಾರ ಪ್ರತಿ ಠಾಣೆಗೆ ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿದೆ. ಯೋಜನೆ ಜಾರಿಗೊಳಿಸಲು ವಿಲರಾಗುವ ಪೊಲೀಸರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ನೀಲಮಣಿ ಎನ್. ರಾಜು ಎಚ್ಚರಿಕೆ ನೀಡಿದ್ದಾರೆ.

‘ಜನಸ್ನೇಹಿ ಪೊಲೀಸ್ ಠಾಣೆ’

* ಠಾಣೆಗೆ ಸಾರ್ವಜನಿಕರು ಪ್ರವೇಶಿಸುತ್ತಿದ್ದಂತೆ ಅವರಿಗೆ ತಿಳಿದ ಹಾಗೆ ‘ನಿಮಗೆ ನಮ್ಮ ಸಹಾಯ ಬೇಕೆ’ ಎಂಬ ಲಕವನ್ನು ಕನ್ನಡ, ಇಂಗ್ಲಿಷ್‌ನಲ್ಲಿರಬೇಕು.

* ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರಿಗೆ ಎಲ್ಲ ಮೂಲ ಸೌಲಭ್ಯ ಒದಗಿಸಬೇಕು.

* ಸಂದರ್ಶಕರ ನೋಂದಣಿ ಪುಸ್ತಕ ಇಡಬೇಕು.

* ಪ್ರತಿ ಠಾಣೆಗೆ 3 ಅಥವಾ 4 ಮಂದಿಗೆ ಸ್‌ಟಾ ಸ್ಕಿಲ್ ತರಬೇತಿ ನೀಡಬೇಕು.

* ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು.

* ಯೋಜನೆ ಅನುಷ್ಠಾನಗೊಳಿಸಿದ್ದಕ್ಕೆ ಪುರಾವೆಯಾಗಿ ಫೋಟೋ ಹಾಗೂ ವಿಡಿಯೋವನ್ನು ಕಳುಹಿಸಬೇಕು.

* ಹಿರಿಯ ಅಧಿಕಾರಿಗಳು ಠಾಣೆಗೆ ಭೇಟಿ ನೀಡುವಾಗ ಇವುಗಳನ್ನು ಗಮನ ಇಟ್ಟು ಪರಿಶೀಲನೆ ನಡೆಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News