×
Ad

ವಿಡಿಯೋ ಮಾಡಿ ಕ್ಯಾಬ್ ಚಾಲಕ ಆತ್ಮಹತ್ಯೆ

Update: 2017-12-06 19:56 IST

ಬೆಂಗಳೂರು, ಡಿ. 6: ಸಾಲದ ಕಂತು ಪಾವತಿಸಿಲ್ಲ ಎಂದು ಸಾರ್ವಜನಿಕವಾಗಿ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಯಿಂದ ನಿಂದನೆಗೊಳಗಾದ ಕಾರಣ ಕ್ಯಾಬ್ ಚಾಲಕರೊಬ್ಬರು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕ್ಯಾಬ್ ಚಾಲಕರಾಗಿದ್ದ ಅನಿಲ್(25) ಮೃತ ದುರ್ದೈವಿ ಎಂದು ಪೊಲೀಸರು ತಿಳಿಸಿದ್ದು, ಆತ್ಮಹತ್ಯೆಗೂ ಮುನ್ನ ಅನಿಲ್ ಮನೆಯಲ್ಲಿ ಮೊಬೈಲ್ ವಿಡಿಯೋ ರೆಕಾರ್ಡ್ ಮಾಡಿ ನೇಣಿ ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.

‘ನನ್ನ ಸಾವಿಗೆ ಸಾಲವೇ ಕಾರಣ. ಯಾವುದೇ ಕಾರಣಕ್ಕೂ ಬ್ಯಾಂಕ್‌ನಲ್ಲಿ ಯಾರೂ ಸಾಲ ಮಾಡಬೇಡಿ. ಹೆಂಡತಿ, ಮಕ್ಕಳು ಯಾರಿಂದಲೂ ನನಗೆ ಬೇಜಾರಿಲ್ಲ. ಸಾಲ ಮಾಡಬೇಡಿ ಗೆಳೆಯರೆ’ ಎಂದು ಅನಿಲ್ ಹೇಳಿರುವ ಮೊಬೈಲ್ ವಿಡಿಯೋ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನಿಲ್ ಬೆನ್ನಿಗಾನಹಳ್ಳಿಯ ಎಸ್‌ಬಿಐ ಶಾಖೆಯಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಕಳೆದ ಮೂರು ತಿಂಗಳ ಕಂತು ಪಾವತಿಸಿರಲಿಲ್ಲ. ಹೀಗಾಗಿ ಕಂತು ಕಟ್ಟಿ ಎಂದು ಕಳೆದ 15 ದಿನಗಳಿಂದ ಬ್ಯಾಂಕ್ ಸಿಬ್ಬಂದಿ ಹೇಳಿದ್ದರು. ಮಂಗಳವಾರ ಮನೆ ಬಳಿ ಬಂದ ಬ್ಯಾಂಕ್ ಸಿಬ್ಬಂದಿ, ಕಂತು ಕಟ್ಟಿಲ್ಲವೆಂದರೆ ಮನೆ ಹರಾಜು ಹಾಕುವ, ನೋಟಿಸ್ ನೀಡುವ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ.

ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಮಾತಿನಿಂದ ಮನನೊಂದು ಅನಿಲ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News