×
Ad

‘ಎಂಎಸ್‌ಐಎಲ್‌ಗೆ ಮೈಸೂರು ವಿವಿ ಅಂಕಪಟ್ಟಿ ಟೆಂಡರ್’: ವೇಣುಗೋಪಾಲ್‌ಗೆ ಎನ್‌ಎಸ್‌ಯುಐ ದೂರು

Update: 2017-12-06 20:10 IST

 ಬೆಂಗಳೂರು, ಡಿ.6: ರಾಜ್ಯ ಸರಕಾರದ ಗಮನಕ್ಕೆ ತಾರದೆ ಉಪಕುಲಪತಿಗಳು ಹಾಗೂ ಅಧಿಕಾರಿಗಳು ಮೈಸೂರು ವಿಶ್ವವಿದ್ಯಾಲಯದ ಅಂಕಪಟ್ಟಿಗಳನ್ನು ತಯಾರಿಸುವ ಟೆಂಡರ್ ಅನ್ನು ಎಂಎಸ್‌ಐಎಲ್‌ಗೆ ನೀಡಿರುವುದು ಸರಿಯಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೆ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಮಂಜುನಾಥ್ ದೂರು ನೀಡಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಎಸ್‌ಐಎಲ್‌ಗೆ ಅಂಕಪಟ್ಟಿಗಳ ಟೆಂಡರ್ ನೀಡಿರುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಹಾಗೂ ಇನ್ನಿತರರು ಸೇರಿ ಸಂಚು ರೂಪಿಸಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ನಾವು ಈ ಪ್ರಕರಣವನ್ನು ಹೊರ ಹಾಕಿದ್ದೇವೆ ಎಂದರು.

 ಅಂಕಪಟ್ಟಿಗಳನ್ನು ಸಿದ್ಧಪಡಿಸುವ ಟೆಂಡರ್ ಎಂಎಸ್‌ಐಎಲ್ ಪಾಲಾದಲ್ಲಿ ನಕಲಿ ದಾಖಲೆಗಳು ತಯಾರಾಗುವ ಸಾಧ್ಯತೆಗಳಿವೆ. ನಕಲಿ ಅಂಕಪಟ್ಟಿಗಳು ಸೃಷ್ಟಿಯಾಗುತ್ತವೆ. ಸಚಿವರ ಗಮನಕ್ಕೆ ತರದೆ ಅಧಿಕಾರಿಗಳು ಈ ವಂಚನೆಗೆ ಮುಂದಾಗಿದ್ದಾರೆ ಎಂದು ಮಂಜುನಾಥ್ ಆರೋಪಿಸಿದರು.

ಇದು ಹಗರಣವಲ್ಲ. ಆದರೆ, ಅದನ್ನು ತಡೆಯಲು ನಾವು ಮುಂದಾಗಿದ್ದೇವೆ. ಟೆಂಡರ್ ಹಿಂದೆ ಸರಕಾರದ ಪಾತ್ರವಿಲ್ಲ. ಅಧಿಕಾರಿಗಳು ಹಾಗೂ ವಿಸಿಗಳು ನಡೆಸಿರುವ ಕುತಂತ್ರ. ಹೀಗಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿಗೆ ದೂರು ನೀಡಿದ್ದೇವೆ ಎಂದು ಮಂಜುನಾಥ್ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News