ಬ್ಯಾಂಕ್ ಸಾಲ ಪಡೆಯಲು ಅರ್ಜಿ ಆಹ್ವಾನ
ಬೆಂಗಳೂರು, ಡಿ. 8: 2017-18ನೆ ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆಯ ವತಿಯಿಂದ ಯುವಜನರು ಕೈಗಾರಿಕಾ ಮತ್ತು ಸೇವಾ ಚಟುವಟಿಕೆ ಸ್ವ ಉದ್ಯೋಗ ಕೈಗೊಳ್ಳಲು 10 ಲಕ್ಷ ರೂ.ವರೆಗೆ ಬ್ಯಾಂಕ್ ಸಾಲ ಪಡೆಯಲು ಅವಕಾಶವಿರುತ್ತದೆ.
ಅರ್ಹ ಗ್ರಾಮೀಣ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ವೆಬ್‌ಸೈಟ್ cmegp.kar.nic.in ಮುಖಾಂತರ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿ. 20 ಕೊನೆಯ ದಿನವಾಗಿರುತ್ತದೆ. ಸಾಮಾನ್ಯ ವರ್ಗದವರಿಗೆ 35ವರ್ಷ ಒಳಗಿರಬೇಕು. ಹಾಗೂ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಮಾಜಿ ಯೋದರು, ಅಂಗವಿಕಲರಿಗೆ ಗರಿಷ್ಟ 45ವರ್ಷದವರು ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ವಿದ್ಯಾರ್ಹತೆ: ಕನಿಷ್ಟ 8ನೆ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಗುರುತಿಸಿದ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ತರಬೇತಿ, ಐಟಿಐ ಡಿಪ್ಲೋಮಾ ಪದವಿ ಹೊಂದಿರಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ರಾಜಾಜಿನಗರ ಕೈಗಾರಿಕಾ ವಸಾಹತು, ರಾಜಾಜಿನಗರ, ಬೆಂ.560 010 ಇವರನ್ನು ಖುದ್ದಾಗಿ ಅಥವಾ ದೂ.080-23501478/81 ಮೂಲಕ ಸಂರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.