ಕಾಂಚನ್‌ಮಾಲಾ ಪಾಂಡೆ ಐತಿಹಾಸಿಕ ಸಾಧನೆ

Update: 2017-12-08 18:46 GMT

ಹೊಸದಿಲ್ಲಿ, ಡಿ.8: ಅಂಧತ್ವದಿಂದ ಬಳಲುತ್ತಿರುವ ಈಜುಗಾರ್ತಿ ಕಾಂಚನ್‌ಮಾಲಾ ಪಾಂಡೆ ಮೆಕ್ಸಿಕೊದಲ್ಲಿ ನಡೆದ ವಿಶ್ವ ಪ್ಯಾರಾ ಈಜು ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವ ಈಜು ಟೂರ್ನಿಯಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಈಜುಪಟು ಎನಿಸಿಕೊಂಡಿರುವ ಪಾಂಡೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ)ದಲ್ಲಿ ಉದ್ಯೋಗದಲ್ಲಿರುವ ಪಾಂಡೆ ಎಸ್-11 ವಿಭಾಗದಲ್ಲಿ ನಡೆದ 200 ಮೀ. ಮಿಡ್ಲೆ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು. ಈ ವರ್ಷದ ಜುಲೈನಲ್ಲಿ ಜರ್ಮನಿಗೆ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ಗೆ ತೆರಳಿದ್ದ ಪಾಂಡೆಗೆ ಸರಕಾರ ನೀಡಿದ್ದ ಹಣ ಕೈಗೆ ಸಿಗದ ಕಾರಣ ದಾರಿ ಕಾಣದೇ ಬರ್ಲಿನ್‌ನಲ್ಲಿ ಭಿಕ್ಷೆ ಎತ್ತಿದ್ದರು. ಸಮಸ್ಯೆಯ ನಡುವೆಯೂ ಟೂರ್ನಿಯಲ್ಲಿ ಬೆಳ್ಳಿ ಜಯಿಸುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News