ಕೃಷಿ ಗಾತ್ರ 26 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆ : ವಿಜ್ಞಾನಿ ಅಶೋಕ್ ವರ್ಮಾ

Update: 2017-12-09 12:25 GMT

ಬೆಂಗಳೂರು, ಡಿ.9: ಕೃಷಿ ಉದ್ಯಮದ ಗಾತ್ರ 2021ರ ವೇಳೆಗೆ 26 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆ ಇದೆ ಎಂದು ಖ್ಯಾತ ವಿಜ್ಞಾನಿ ಅಶೋಕ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಎರಡು ವರ್ಷಗಳ ಹಿಂದೆ 23 ಲಕ್ಷ ಕೋಟಿ ರೂ. ಇದ್ದ ಉದ್ಯಮದ ಗಾತ್ರ 2021ರ ವೇಳೆಗೆ ಶೇ.8ರಷ್ಟು ಬೆಳವಣಿಗೆ ದರ ದಾಖಲಿಸಲಿದೆ. ಕೃಷಿ ಕ್ಷೇತ್ರವನ್ನು ಅಭಿವೃದ್ಧಿ, ಮಣ್ಣಿನ ನಿರ್ವಹಣೆ, ಉತ್ಪಾದಕತೆ ಸೇರಿದಂತೆ ಇನ್ನು ಹಲವಾರು ಕ್ಷೇತ್ರಗಳಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಅವಕಾಶವಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಕೃಷಿ ಉದ್ಯಮವು ಕಾರ್ಪೋರೇಟ್ ವಹಿವಾಟು ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವುದರಿಂದ ಕೃಷಿ ಬೆಳವಣಿಗೆ ದರ ಹೆಚ್ಚಾಗುವ ನಿರೀಕ್ಷೆಯನ್ನು ತಳ್ಳಿಹಾಕುವಂತಿಲ್ಲ. ಡಿಜಿಟಲ್ ಸ್ಫೋಟದಿಂದಾಗಿ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ರೈತರಿಗೆ ಹಲವು ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News