ಇ-ಖಾತೆ ಮಾಡಿಕೊಡಲು 30ಸಾವಿರ ರೂ.ಲಂಚ: ಎಸಿಬಿ ಬಲೆಗೆ ಬಿದ್ದ ಪಿಡಿಒ

Update: 2017-12-09 12:28 GMT

ಬೆಂಗಳೂರು, ಡಿ. 9: ಎರಡು ನಿವೇಶನ ಇ-ಖಾತೆ ಮಾಡಿಕೊಡಲು 30ಸಾವಿರ ರೂ.ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಪಿಡಿಒ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಕ್ಕಿಬಿದಿದ್ದಾರೆ.

ಬಲೆಗೆ ಬಿದ್ದವರನ್ನು ಸಮೇತನಗಳ್ಳಿ ಪಿಡಿಒ ದಾಸಪ್ಪ ಎಂದು ಗುರುತಿಸಲಾಗಿದೆ. ಕೋಲಾರ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ನಿವೇಶನಗಳಿಗೆ ಇ-ಖಾತೆ ಮಾಡಿಕೊಡಲು ಸಮೇತನಹಳ್ಳಿ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು. ಇ-ಖಾತೆಗೆ 30 ಸಾವಿರ ರೂ.ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಲಂಚ ನೀಡದೆ ಖಾತೆ ಮಾಡಿಕೊಡಲು ನಿರಾಕರಿಸಿದ ಕಾರಣ ಪಿಡಿಒ ವಿರುದ್ಧ ಅವರು ಎಸಿಬಿಗೆ ದೂರು ನೀಡಿದ್ದರು. ಡಿ.8ರಂದು ದಾಸಪ್ಪ ಲಂಚ ಪಡೆಯುವ ವೇಳೆ ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಪ್ರಕಟಣೆಯಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News