ವಿರಾಟ್ -ಅನುಷ್ಕಾ ಮದುವೆಗೆ ಸಚಿನ್, ಯುವರಾಜ್‌ಗೆ ಮಾತ್ರ ಆಮಂತ್ರಣ ?

Update: 2017-12-10 05:42 GMT

 ಹೊಸದಿಲ್ಲಿ, ಡಿ.10: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ವಿವಾಹ ಇಟಲಿಯಲ್ಲಿ ನಡೆಯಲಿದ್ದು, ಕ್ರಿಕೆಟಿಗರ ಪೈಕಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮತ್ತು ಆಲ್‌ರೌಂಡರ್ ಯುವರಾಜ್ ಸಿಂಗ್ ಅವರಿಗೆ ಮಾತ್ರ ವಿವಾಹದ ಆಮಂತ್ರಣ ನೀಡಲಾಗಿದೆ ಎಂದು ತಿಳಿದು ಬಂದಿದೆ.

 ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತದ ಕ್ರಿಕೆಟ್ ತಂಡದ ಬಹುತೇಕ ಸದಸ್ಯರು ಬ್ಯುಸಿಯಾಗಿರುವ ಹಿನ್ನೆಲೆಯಲ್ಲಿ ತಂಡದ ಯಾರನ್ನೂ ಆಹ್ವಾನಿಸಿಲ್ಲ ಎಂದು ಕೊಹ್ಲಿಯ ಆಪ್ತ ಮೂಲಗಳು ತಿಳಿಸಿವೆ.

  ಡಿ.26ರಂದು ಮುಂಬೈನಲ್ಲಿ ವಿರಾಟ್ -ಅನುಷ್ಕಾ ಅವರು ವಿವಾಹದ ಔತಣಕೂಟವನ್ನು ಏರ್ಪಡಿಸಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾದ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ವಿರಾಟ್ -ಅನುಷ್ಕಾ ವಿವಾಹದ ಔತಣಕೂಟದಲ್ಲಿ ಪಾಲ್ಗೊಂಡು ಭಾರತದ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕ ಪ್ರಯಾಣ ಬೆಳೆಸಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News