ಮೊದಲ ಏಕದಿನ: ಭಾರತ 70/8(26 ಓವರ್)

Update: 2017-12-10 08:29 GMT
ಲಂಕಾದ  ಸುರಂಗ ಲಕ್ಮಲ್ 4 ವಿಕೆಟ್ (10-4-13-4) 

ಧರ್ಮಶಾಲಾ, ಡಿ.10: ಪ್ರವಾಸಿ ಶ್ರೀಲಂಕಾ ವಿರುದ್ಧದ  ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂದು 

ಟೀಮ್ ಇಂಡಿಯಾ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ.

ಒಂದು  ಹಂತದಲ್ಲಿ ಲಕ್ಮಲ್ ದಾಳಿಗೆ ಸಿಲುಕಿದ ಭಾರತ 20 ಓವರ್‌ಗಳಲ್ಲಿ 29 ರನ್‌ಗಳಿಗೆ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ  ಎಂ.ಎಸ್.ಧೋನಿ ಮತ್ತು ಕುಲ್ ದೀಪ್ 8ನೇ ವಿಕೆಟ್ ಗೆ 41 ರನ್ ಸೇರಿಸಿದರು. ಇದರ ಫಲವಾಗಿ ಭಾರತ 26 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 70 ರನ್ ಗಳಿಸಿತು.

  ಶಿಖರ್ ಧವನ್, ದಿನೇಶ್ ಕಾರ್ತಿಕ್, ಭುವನೇಶ್ವರ ಕುಮಾರ್ ಸೊನ್ನೆ ಸುತ್ತಿದ್ದಾರೆ. ರೋಹಿತ್ ಶರ್ಮ ಮತ್ತು ಮನೀಷ್ ಪಾಂಡೆ ತಲಾ 2 ರನ್, ಶ್ರೇಯಸ್ ಅಯ್ಯರ್ 9ರನ್ ಮತ್ತು ಹಾರ್ದಿಕ್ ಪಾಂಡ್ಯ 10 ರನ್ , ಕುಲ್ ದೀಪ್ ಯಾದವ್ 19 ರನ್ ಗಳಿಸಿ  ಔಟಾಗಿದ್ದಾರೆ. 

ಲಕ್ಮಲ್ ದಾಳಿಗೆ ಟೀಮ್ ಇಂಡಿಯಾ ತತ್ತರಿಸಿದೆ. ಅವರು 13 ರನ್ ನೀಡಿ 4 ವಿಕೆಟ್(10-4-13-4) ಉಡಾಯಿಸಿದ್ದಾರೆ. ನುವಾನ್ ಪ್ರದೀಪ್ 2 ವಿಕೆಟ್(5-2-7-2) ಮತ್ತು ಮ್ಯಾಥ್ಯೂಸ್ 1 ವಿಕೆಟ್ (5-2-8-1 ) ಎಗರಿಸಿ ಪ್ರಹಾರ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News