ಧೋನಿ ಅರ್ಧಶತಕ ; ಭಾರತ 112 ರನ್ ಗಳಿಗೆ ಆಲೌಟ್

Update: 2017-12-10 09:42 GMT

ಧರ್ಮಶಾಲಾ, ಡಿ.10: ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 38.2 ಓವರ್ ಗಳಲ್ಲಿ 112 ರನ್ ಗಳಿಗೆ ಆಲೌಟಾಗಿದೆ.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅರ್ಧಶತಕ ನೆರವಿನಲ್ಲಿ ಭಾರತದ ಸ್ಕೋರ್ 100ರ ಗಡಿ ದಾಟಿತು.

ಧೋನಿ 310ನೇ ಏಕದಿನ ಪಂದ್ಯದಲ್ಲಿ 78 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಧೋನಿ 65 ರನ್ (87ಎ, 10ಬೌ,2ಸಿ) ಗಳಿಸಿ ಔಟಾದರು.

ಇವರನ್ನು ಹೊರತುಪಡಿಸಿದರೆ ಕುಲ್ ದೀಪ್ ಯಾದವ್ (19) ಮತ್ತು ಹಾರ್ದಿಕ್ ಪಾಂಡ್ಯ (10) ಎರಡಂಕೆಯ ಸ್ಕೋರ್ ದಾಖಲಿಸಿದರು.

ಒಂದು ಹಂತದಲ್ಲಿ ಲಕ್ಮಲ್ ದಾಳಿಗೆ ಸಿಲುಕಿದ ಭಾರತ 20 ಓವರ್‌ಗಳಲ್ಲಿ 29 ರನ್‌ಗಳಿಗೆ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಧೋನಿ ಮತ್ತು ಕುಲ್ ದೀಪ್ ಯಾದವ್ ಹೋರಾಟದ ಮೂಲಕ 7ನೇ ವಿಕೆಟ್ ಗೆ 41 ರನ್ ಸೇರಿಸಿದರು.

  ಶಿಖರ್ ಧವನ್, ದಿನೇಶ್ ಕಾರ್ತಿಕ್, ಭುವನೇಶ್ವರ ಕುಮಾರ್,ಜಸ್ ಪ್ರೀತ್ ಬುಮ್ರಾ ಮತ್ತು ಯುಜುವೇಂದ್ರ ಚಹಾಲ್( ಔಟಾಗದೆ 0)  ಸೊನ್ನೆ ಸುತ್ತಿದ್ದಾರೆ. ರೋಹಿತ್ ಶರ್ಮ ಮತ್ತು ಮನೀಷ್ ಪಾಂಡೆ ತಲಾ 2 ರನ್, ಶ್ರೇಯಸ್ ಅಯ್ಯರ್ 9ರನ್ ಗಳಿಸಿ ಔಟಾದರು..

ಲಕ್ಮಲ್ ಅವರು 13 ರನ್ ನೀಡಿ 4 ವಿಕೆಟ್(10-4-13-4) , ನುವಾನ್ ಪ್ರದೀಪ್ 2 ವಿಕೆಟ್(10-4-37-2) , ಪೆರೇರಾ (4.2-0-29-1),  ಮ್ಯಾಥ್ಯೂಸ್ (5-2-8-1 ), ಧನಂಜಯ (5-2-7-1 )  ಮತ್ತು ಪಥಿರಣ (4-1-16-1) ತಲಾ 1 ವಿಕೆಟ್ ಪಡೆದರು.

ಟಾಸ್ ಜಯಿಸಿದ ಶ್ರೀಲಂಕಾ ಫೀಲ್ಡಿಂಗ್ ಆಯ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News