ಮೊದಲ ಏಕದಿನ: ಲಂಕೆಗೆ 7 ವಿಕೆಟ್‌ಗಳ ಜಯ

Update: 2017-12-10 11:56 GMT
ಲಂಕಾದ  ಸುರಂಗ ಲಕ್ಮಲ್ 4 ವಿಕೆಟ್ (10-4-13-4) 

ಧರ್ಮಶಾಲಾ, ಡಿ.10: ಶ್ರೀಲಂಕಾ ತಂಡ ರವಿವಾರ ಇಲ್ಲಿ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 113 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ ತಂಡ 20.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 114 ರನ್ ಗಳಿಸಿತು.

ಉಪುಲ್ ತರಂಗ 49 ರನ್(46ಎ, 10 ಬೌ) , ಆ್ಯಂಜೆಲೊ ಮ್ಯಾಥ್ಯೂಸ್ ಔಟಾಗದೆ 25 ರನ್(42ಎ, 5ಬೌ) ಮತ್ತು ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಔಟಾಗದೆ 26ರನ್( 24ಎ, 5ಬೌ) ಗಳಿಸಿ ತಂಡದ ಗೆಲುವಿಗೆ ನೆರವಾದರು.

ಭಾರತದ ಪರ ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಹಂಚಿಕೊಂಡರು.

ಭಾರತ ಇದಕ್ಕೂ ಮೊದಲು ಮಾಜಿ ನಾಯಕ ನಾಯಕ ಮಹೇಂದ್ರ ಸಿಂಗ್ ಧೋನಿ ಅರ್ಧಶತಕ (65) ನೆರವಿನಲ್ಲಿ 112 ರನ್ ಗಳಿಸಿತ್ತು.ಲಂಕಾದ  ಸುರಂಗ ಲಕ್ಮಲ್ 4 ವಿಕೆಟ್ (10-4-13-4) ಉಡಾಯಿಸುವ ಮೂಲಕ ಭಾರತವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News