ಜಿತು ರಾಯ್, ಹೀನಾ ಸಿಧುಗೆ ಕಂಚು

Update: 2017-12-10 18:27 GMT

ಟೋಕಿಯೊ, ಡಿ.10: ಜಪಾನ್‌ನ ವೊಕೊ ಸಿಟಿಯಲ್ಲಿ ನಡೆದ 10ನೇ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಶೂಟರ್‌ಗಳಾದ ಜಿತುರಾಯ್ ಮತ್ತು ಹೀನಾ ಸಿಧು ಕಂಚು ಪಡೆದಿದ್ದಾರೆ.

ಜಿತುರಾಯ್ ಅವರು ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಪಡೆದರು. ತಂಡ ವಿಭಾಗದಲ್ಲಿ ಜಿತುರಾಯ್ ಶಾಹ್‌ಝಾರ್ ರಿಝ್ವಿ ಮತ್ತು ಓಂಕಾರ್ ಸಿಂಗ್ ಚಿನ್ನ ಪಡೆದರು.

ಇದೇ ವೇಳೆ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಹೀನಾ ಸಿಧು ಕಂಚು ಪಡೆದರು.

ಹೀನಾ ಸಿಧು ಅವರು ಶ್ರೀ ನಿವೇಥ ಪರಮಾನಂದಮ್ ಮತ್ತು ಹರ್ವಿನ್ ಸರಾವೊ ಜೊತೆ ತಂಡ ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದುಕೊಂಡಿದ್ದಾರೆ.

ಪುರುಷರ ಜೂನಿಯರ್ ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅನ್ಮೊಲ್ ಜೈನ್ ಕಂಚು , ತಂಡ ಸ್ಪರ್ಧೆಯಲ್ಲಿ ಅನ್ಮೊಲ್ , ಗೌರವ್ ರಾಣಾ ಮತ್ತು ಅಭಿಷೇಕ್ ಆರ್ಯ ಬೆಳ್ಳಿ ಪಡೆದರು.

ಈ ಕೂಟದಲ್ಲಿ ಭಾರತ 4 ಚಿನ್ನ, 6ಬೆಳ್ಳಿ ಮತ್ತು 7 ಕಂಚು ಸೇರಿದಂತೆ 17 ಪದಕಗಳನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News