ಅಜಾಗರೂಕತೆಯ ದ್ವಿಚಕ್ರ ಚಾಲನೆ ನಿಯಂತ್ರಿಸಿ

Update: 2017-12-11 18:50 GMT

ಮಾನ್ಯರೇ,

ನಗರದ ಮುಖ್ಯ ರಸ್ತೆಗಳು ಹಾಗೂ ಅಡ್ಡ ರಸ್ತೆಗಳಲ್ಲಿ ಹಲವು ಯುವಕರು ಹೆಲ್ಮೆಟ್ ಧರಿಸದೆ ಒಂದೊಂದು ಬೈಕ್‌ಗಳಲ್ಲಿ ಮೂರು, ನಾಲ್ಕು ಮಂದಿ ಕುಳಿತುಕೊಂಡು ‘ಜಾಲಿರೈಡ್’ ಮಾಡುತ್ತಾರೆ. ಇವರ ಅತ್ಯಂತ ವೇಗ ಹಾಗೂ ಅಜಾಗರೂಕತೆಯ ಬೈಕ್ ಚಾಲನೆಯಿಂದಾಗಿ ಇತರ ದ್ವಿಚಕ್ರ ವಾಹನ ಸವಾರರು ತುಂಬಾ ತೊಂದರೆ ಎದುರಿಸಬೇಕಾಗಿದೆ. ಇವರನ್ನು ನಿಯಂತ್ರಿಸುವವರೇ ಇಲ್ಲವೆಂಬಂತೆ ಇವರ ವಾಹನ ಚಾಲನೆಯಿರುತ್ತದೆ. ಕೆಲವರಂತೂ ರಸ್ತೆಯಲ್ಲಿ ಬೊಬ್ಬೆ ಹಾಕಿಕೊಂಡೇ ಸಂಚರಿಸುತ್ತಾರೆ. ಇನ್ನು ಕೆಲವರ ಬೈಕ್‌ಗಳ ಶಬ್ದಗಳು ಬೆಚ್ಚಿಬೀಳುವಂತಾಗಿರುತ್ತದೆ. ಇವರ ಇಂತಹ ದುರ್ವರ್ತನೆಯಿಂದಾಗಿ ಪಾದಚಾರಿಗಳಂತೂ ರಸ್ತೆಯಲ್ಲಿ ಸಂಚರಿಸಲು ಹೆದರುವಂತಾಗಿದೆ.

ಆದ್ದರಿಂದ ಸಂಬಂಧಪಟ್ಟವರು ಈ ಸಮಸ್ಯೆಯ ಬಗ್ಗೆ ಇನ್ನಾದರೂ ಗಮನಹರಿಸಿ ಇಂತಹ ಯುವಕರನ್ನು ಸರಿದಾರಿಗೆ ತರಬೇಕಾಗಿದೆ.

Writer - -ಜೆ. ಎಫ್. ಡಿ’ಸೋಜಾ, ಮಂಗಳೂರು

contributor

Editor - -ಜೆ. ಎಫ್. ಡಿ’ಸೋಜಾ, ಮಂಗಳೂರು

contributor

Similar News