ಸಿರಿಯದಿಂದ ಸೈನಿಕರ ಆಂಶಿಕ ವಾಪಸ್: ಪುಟಿನ್

Update: 2017-12-12 17:34 GMT

ಜಿದ್ದಾ (ಸೌದಿ ಅರೇಬಿಯ), ಡಿ. 12: ಸೋಮವಾರ ಸಿರಿಯಕ್ಕೆ ಅಚ್ಚರಿಯ ಭೇಟಿ ನೀಡಿದ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಿರಿಯದಲ್ಲಿ ತನ್ನ ಸೇನೆಯ ವಿಜಯವನ್ನು ಘೋಷಿಸಿದರು ಹಾಗೂ ಅಲ್ಲಿಂದ ತನ್ನ ಸೇನಾ ಪಡೆಗಳನ್ನು ಆಂಶಿಕವಾಗಿ ವಾಪಸ್ ಕರೆಸಲಾಗುವುದು ಎಂದರು.

ಇದು ಸಿರಿಯಕ್ಕೆ ಪುಟಿನ್ ನೀಡಿದ ಮೊದಲ ಭೇಟಿಯಾಗಿದೆ. ಸಿರಿಯದಲ್ಲಿ ರಶ್ಯ 2015ರಲ್ಲಿ ನಡೆಸಿದ ವಾಯು ದಾಳಿಯಿಂದಾಗಿ ಸಿರಿಯ ಸೇನೆಯು ಬಂಡುಕೋರರ ವಿರುದ್ಧ ನಿರ್ಣಾಯಕ ಮೇಲುಗೈ ಸಾಧಿಸಲು ಸಾಧ್ಯವಾಯಿತು.

ಸಿರಿಯದಲ್ಲಿ 2011ರಲ್ಲಿ ಆರಂಭಗೊಂಡ ಬಂಡಾಯದಲ್ಲಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸಿರಿಯದ ಹಮೆಮಿಮ್ ವಾಯುನೆಲೆಗೆ ಭೇಟಿ ನೀಡಿದ ವೇಳೆ ಅವರು ಈ ಘೋಷಣೆಯನ್ನು ಮಾಡಿದರು. ಅಲ್ಲಿ ಪುಟಿನ್ ಸಿರಿಯ ಅಧ್ಯಕ್ಷ ಬಶರ್ ಅಲ್ ಅಸಾದ್ ಜೊತೆ ಮಾತುಕತೆ ನಡೆಸಿದರು ಹಾಗೂ ರಶ್ಯ ಪಡೆಗಳನ್ನು ಉದ್ದೇಶಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News