ಸಂಸ್ಕೃತಿಯ ರಕ್ಷಕರಿಂದಲೇ ಘೋರ ಅಪಚಾರ

Update: 2017-12-13 18:44 GMT

ಮಾನ್ಯರೇ,

ಗುಜರಾತ್‌ನಲ್ಲಿ ಅಹ್ಮದಾಬಾದ್‌ನಿಂದ 180 ಕಿ.ಮೀ. ದೂರದಲ್ಲಿ ಉತ್ತರಕ್ಕೆ ಬನಸ್ಕಾಂತ ಎಂಬ ಜಿಲ್ಲೆಯಲ್ಲಿ ಅಂಬಾಜಿ ಮಾತೆಯ ಮಂದಿರವಿದೆ. ಅದು ದೇಶದ 51 ಶಕ್ತಿ ಪೀಠಗಳಲ್ಲಿ ಒಂದು. ಅಲ್ಲಿ ಯಾವುದೇ ಮೂರ್ತಿಯನ್ನು ಪೂಜಿಸದೆ ಶ್ರೀವಿಸ ಯಂತ್ರ ಎಂಬ ತಾಮ್ರದ ಫಲಕವನ್ನು ಪೂಜಿಸಲಾಗುತ್ತದೆ. ಅದನ್ನು ಬರಿಗಣ್ಣಿನಿಂದ ನೋಡುವುದೂ ನಿಷಿದ್ಧ. ಭಕ್ತರು ಕಣ್ಣಿಗೆ ಬಟ್ಟೆ ಕಟ್ಟಿ ಮಾತ್ರ ಅದರ ಮುಂದೆ ನಿಂತು ಅರ್ಚಿಸಬಹುದು. ಹಾಗಾಗಿ ಈ ವರೆಗೆ ಅದರ ರೇಖಾ ಚಿತ್ರವನ್ನೂ ಯಾರೂ ಚಿತ್ರಿಸಿಲ್ಲ. ಅಲ್ಲಿ ಫೊಟೋ-ವೀಡಿಯೊ ತೆಗೆಯುವುದು ನಿಷಿದ್ಧ ಮಾತ್ರವಲ್ಲ, ಕೈಯಿಂದಲೂ ಪವಿತ್ರ ಯಂತ್ರದ ಚಿತ್ರ ಬರೆಯಬಾರದು ಎಂಬ ನಿಯಮವಿದೆ. ಹಾಗಾಗಿ ಗೂಗಲ್,ವಿಕಿಪೀಡಿಯಾದಲ್ಲೂ ಈ ಯಂತ್ರದ ಚಿತ್ರ ಲಭ್ಯವಿಲ್ಲ.

ಈ ಮಂಗಳವಾರ ಗುಜರಾತ್ ಚುನಾವಣೆ ಪ್ರಚಾರದ ಕೊನೆಯ ದಿನ ಪ್ರಧಾನಿ ಮೋದಿಯವರು ಈ ಅಂಬಾಜಿ ದೇವಿಯ ದೇವಾಲಯಕ್ಕೆ ವೀಡಿಯೊಗ್ರಾಫರ್‌ಗಳೊಂದಿಗೆ ಹೋಗಿ ಒಂದು ಗಂಟೆ ಪೂಜೆ ಮಾಡಿ ತನ್ನ ಪೂಜೆಯ ವೀಡಿಯೋವನ್ನು ಭಾರತದ ಎಲ್ಲಾ ಟಿವಿ ಚಾನೆಲ್‌ಗಳಲ್ಲಿ ಲೈವ್ ಆಗಿ ತೋರಿಸಿ ಆ ದೇವಾಲಯದ ಸಾವಿರಾರು ವರ್ಷದ ಕಠಿಣ ನಿಯಮ ಮುರಿದಿದ್ದಾರೆ. ಮೇಲಾಗಿ ಆ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬೆಳಗ್ಗೆಯೇ ಬರುತ್ತಾರೆ. ಆದರೆ ಮೋದಿಯ ಭೇಟಿಗಾಗಿ ಆ ದೇವಸ್ಥಾನವನ್ನು ಬೆಳಗಿನ ಹೊತ್ತು ಮೂರು-ನಾಲ್ಕು ಗಂಟೆ ಇತರ ಭಕ್ತರನ್ನು ಒಳಗೆ ಬಿಡದೆ ಇದ್ದುದರಿಂದ ಹಲವಾರು ಭಕ್ತರಿಗೆ ತೊಂದರೆಯಾಗಿದೆ. ಅಲ್ಲದೆ ಅಂಬಾಜಿ ದೇವಿಯ ದರ್ಶನಕ್ಕೆ ಬರುವ ನೈಜ ಭಕ್ತರನ್ನು ತಡೆಯುವವರಿಗೆ ಘೋರ ಪಾಪ ತಗಲುತ್ತದೆ ಎಂದು ಗುಜರಾತಿಗಳ ನಂಬಿಕೆಯಿದೆ. ಭಾರತೀಯ ಸಂಸ್ಕೃತಿಯ ರಕ್ಷಕ ಎಂದು ಬಡಾಯಿ ಕೊಚ್ಚುವವರಿಂದಲೇ ಹಿಂದೂ ದೇವರಿಗೆ ಇಂತಹ ಘೋರ ಅಪಚಾರ ಆಗಿರುವುದು ನಿಜಕ್ಕೂ ದುರಂತ.

Writer - -ಕೇಶವರಾಮ ಅಡಪ, ಕಿನ್ನಿಗೋಳಿ

contributor

Editor - -ಕೇಶವರಾಮ ಅಡಪ, ಕಿನ್ನಿಗೋಳಿ

contributor

Similar News