ಬೆಂಗಳೂರು: ಡಿಸೆಂಬರ್ 16, 17ರಂದು ‘ಪ್ರಗ್ಯಾನ್ ಹ್ಯಾಕಥಾನ್’

Update: 2017-12-14 15:32 GMT

ಬೆಂಗಳೂರು, ಡಿ.14: ತಿರುಚಿರಾಪಳ್ಳಿಯ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಗ್ಯಾನ್ ತಂತ್ರಜ್ಞಾನ ಪ್ರಿಯರಿಗೆ, ವಿನೂತನ ಆಲೋಚನೆಗಳನ್ನು ಹೊಂದಿರುವ ಯುವಜನತೆಗೆ ಅವಕಾಶವೊಂದನ್ನು ನೀಡುತ್ತಿದೆ.

ಸೂಪರ್ ಪವರ್ ಕೋಡ್ ಸಂಶೋಧಿಸುವ ಹಾಗು ಸೃಷ್ಟಿಸುವ ಅವಕಾಶವನ್ನು ಪ್ರಗ್ಯಾನ್ ಯುವ ಜನತೆಗೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಎಸ್ ಪಿಐ ಸಿನಿಮಾಸ್ ಸಹ ಪ್ರಾಯೋಜಕತ್ವದೊಂದಿಗೆ ಪ್ರಗ್ಯಾನ್  ಡಿಸೆಂಬರ್ 16 ಮತ್ತು 17ರಂದು ಹ್ಯಾಕಥಾನ್ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಇಪಿಐಪಿ ಝೋನ್ ನ ಎಸ್ ಎಪಿ ಲ್ಯಾಬ್ಸ್ ಇಂಡಿಯಾದಲ್ಲಿ ಕಾರ್ಯಕ್ರಮ ನಡೆಯಲಿದೆ.

ಯುವ ಪ್ರತಿಭೆಗಳು, ತಂತ್ರಜ್ಞಾನ ಪ್ರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು, ಸಂವಾದ, ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರವನ್ನು ಪ್ರಸ್ತುತಪಡಿಸಬಹುದಾಗಿದೆ. 30 ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಮನೋರಂಜನೆ, ಸಂವಾದದ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಚಿತ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ವರ್ಷ ಮನೋರಂಜನೆ, ಸಾಂಸ್ಥಿಕ ಆಟೊಮೇಶನ್, ಸಾಮಾಜಿಕ, ಹಣಕಾಸು ತಂತ್ರಜ್ಞಾನ, ಶಿಕ್ಷಣ ಹಾಗೂ ಕ್ರೀಡೆ ಎಂಬ ಆರು ಪ್ರಮುಖ ವಲಯಗಳನ್ನು ನಿರ್ವಹಿಸಲಾಗುತ್ತಿದೆ. 

ಮನೋರಂಜನೆ ಕ್ಷೇತ್ರದಲ್ಲಿ  ಚಲನಚಿತ್ರಗಳು ಮತ್ತು ಈವೆಂಟ್‍ಗಳನ್ನು ಬಳಸಿ ಗ್ರಾಹಕರೊಂದಿಗೆ ಹೇಗೆ ಸಂವಾದ ನಡೆಸಬಹುದು ಎನ್ನುವುದರ ಬಗ್ಗೆ ಸವಾಲಿರುತ್ತದೆ.

ಸಾಂಸ್ಥಿಕ ಆಟೊಮೇಶನ್ ಕ್ಷೇತ್ರವು ಪ್ರಮುಖವಾಗಿ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಕಲಿಕೆಯ ಸುತ್ತ ಕೇಂದ್ರಿತವಾಗಿರುತ್ತದೆ. ಸ್ಪರ್ಧಿಗಳಿಗೆ ಅಂದಾಜಿಸುವಿಕೆ, ವೈಯಕ್ತಿಕ ಮತ್ತು ಬಳಕೆದಾರರ ಅನುಭವಗಳನ್ನು ವಿಭಿನ್ನ ವ್ಯಾಪಾರ ಪ್ರಕ್ರಿಯೆಗೆ ಬಳಸಿಕೊಳ್ಳುವ ಸವಾಲನ್ನು ಒಡ್ಡಲಾಗುತ್ತದೆ.

ಸಾಮಾಜಿಕ ವಲಯದಲ್ಲಿ ಸ್ಪರ್ಧಿಗಳಿಗೆ ಸಮಾಜದ ಮುಖ್ಯವಾಹಿನಿಯ ದೈನಂದಿನ ಕಾರ್ಯಚಟುವಟಿಕೆಗಳಿಗೆ ನೆರವಾಗುವ ರೀತಿಯಲ್ಲಿ ಸಮಸ್ಯೆಗಳು ಮತ್ತು ಪರಿಹಾರಗಳ ಸವಾಲನ್ನು ಒಡ್ಡಲಾಗುವುದು. ಸಾಮಾಜಿಕ ಸಮಸ್ಯೆಗಳ ಉದಾಹರಣೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯಂತಹ ವಿಷಯಗಳು ಸೇರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವಿನೂತನ ಪರಿಹಾರಗಳನ್ನೂ ಕೂಡಾ ಪ್ರಸ್ತಾಪಿಸಬಹುದಾಗಿದೆ.

ವ್ಯವಹಾರ ವಹಿವಾಟು ಮತ್ತು ಹಣದ ನಿರ್ವಹಣೆಯನ್ನು ಸ್ವಯಂಚಾಲಿತಗೊಳಿಸುವುದು ಹೇಗೆ ಎನ್ನುವುದು ಹಣಕಾಸು ತಂತ್ರಜ್ಞಾನ ಅಥವಾ ಫಿನ್ ಟೆಕ್ ಆಗಿದೆ. ಇದರಲ್ಲಿ ಸ್ಪರ್ಧಿಗಳಿಗೆ ಬ್ಲಾಕ್ ಚೈನ್ ತಂತ್ರಜ್ಞಾನ ಮತ್ತು ಷೇರು ಮಾರುಕಟ್ಟೆಯ ವಿಶ್ಲೇಷಣೆಯಂತಹ ಕ್ಷೇತ್ರದಲ್ಲಿ ಪ್ರಯೋಗಗಳನ್ನು ನಡೆಸುವ ಕಾರ್ಯಯೋಜನೆ ನೀಡಲಾಗುತ್ತದೆ.

ವಿಶ್ವಾದ್ಯಂತ ವಿದ್ಯಾರ್ಥಿಗಳ ಕಲಿಕೆ ಅನುಭವದ ಸುಧಾರಣೆಯ ಅವಕಾಶವನ್ನು ಶಿಕ್ಷಣ ವಲಯದಲ್ಲಿ ನೀಡಲಾಗುತ್ತದೆ.

ಕ್ರೀಡೆ ಕ್ಷೇತ್ರದಲ್ಲಿ ಕ್ರೀಡಾಪಟುಗಳಿಗೆ ಪ್ರಯೋಜನವಾಗುವ  ತಂತ್ರಜ್ಞಾನವನ್ನು ಸೃಷ್ಟಿಸುವ ಸವಾಲು ನೀಡಲಾಗುತ್ತದೆ. ಇಂತಹ ಪರಿಹಾರಗಳೆಂದರೆ ಗೋಲ್ ಲೈನ್ ಮತ್ತು ಹಾಟ್‍ಸ್ಪಾಟ್ ತಂತ್ರಜ್ಞಾನ.

ಪ್ರಗ್ಯಾನ್ ಹ್ಯಾಕಥಾನ್-2017ರ ವಿಜೇತರು ನಗದು ಬಹುಮಾನ, ಗೂಡಿಸ್ ಮತ್ತು ಅವಾರ್ಡ್ ಆಫ್ ಡಿಸ್ಟಿಂಕ್ಷನ್ ಸೇರಿ 2 ಲಕ್ಷ ಮೌಲ್ಯದ ಬಹುಮಾನ ಪಡೆಯಲಿದ್ದಾರೆ. ಇಂಟರ್ನ್‍ಶಿಪ್ ಮತ್ತು ಇನ್‍ಕ್ಯುಬೇಶನ್‍ ಅವಕಾಶಗಳು ಕೂಡಾ ಸಿಗಲಿದೆ..

ಹೆಚ್ಚಿನ ಮಾಹಿತಿಗಾಗಿ https://www.pragyan.org/hackathonನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News