ಕೃತಕ ಗರ್ಭಧಾರಣೆಯಲ್ಲಿ ತನ್ನದೇ ವೀರ್ಯ ಬಳಸಿದ್ದ ವೈದ್ಯನ ಬಂಧನ

Update: 2017-12-14 17:01 GMT

ಇಂಡಿಯಾನಪೊಲಿಸ್ (ಅಮೆರಿಕ), ಡಿ. 14: ಕೃತಕ ಗರ್ಭಧಾರಣೆಯ ಅಗತ್ಯವಿದ್ದವರಿಗೆ ತನ್ನದೇ ವೀರ್ಯವನ್ನು ನೀಡಿ ಚಿಕಿತ್ಸೆ ನೀಡಿರುವ ಆರೋಪದಲ್ಲಿ ನಿವೃತ್ತ ವೈದ್ಯರೊಬ್ಬರನ್ನು ಅಮೆರಿಕದ ಇಂಡಿಯಾನಪೊಲಿಸ್ ರಾಜ್ಯದ ಪೊಲೀಸರು ಬಂಧಿಸಿದ್ದಾರೆ.

ಆರಂಭದಲ್ಲಿ ತನಿಖಾಧಿಕಾರಿಗಳಿಗೆ ಸುಳ್ಳು ಹೇಳಿದ ಆರೋಪವನ್ನೂ 79 ವರ್ಷದ ಡಾ. ಡೊನಾಲ್ಡ್ ಕ್ಲೈನ್‌ಎದುರಿಸುತ್ತಿದ್ದಾರೆ.

ತನ್ನದೇ ವೀರ್ಯವನ್ನು ಬಳಸಿ ಕೃತಕ ಗರ್ಭಧಾರಣೆ ಮಾಡಿದ ಆರೋಪವನ್ನು ನಿರಾಕರಿಸಿ ಅವರು ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದರು ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ಅವರ ಕನಿಷ್ಠ ಇಬ್ಬರು ರೋಗಿಗಳ ಮಕ್ಕಳ ಜೈವಿಕ ತಂದೆ ಅವರೇ ಆಗಿರುವುದು ಪಿತೃತ್ವ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ಹೇಳಿವೆ. ಇತರ 20 ಮಕ್ಕಳ ಜೈವಿಕ ತಂದೆಯೂ ಅವರಾಗಿರಬಹುದು ಎನ್ನುವುದು ಆನ್‌ಲೈನ್ ವಂಶವಾಹಿ ಪರೀಕ್ಷೆಗಳಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News