ಅರೆ ಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡಮಿ ಅಧ್ಯಕ್ಷರು-ಸದಸ್ಯರ ನೇಮಕ
Update: 2017-12-15 18:29 IST
ಬೆಂಗಳೂರು, ಡಿ. 15: ಕರ್ನಾಟಕ ರಾಜ್ಯ ಅರೆ ಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡಮಿ ಅಧ್ಯಕ್ಷರನ್ನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಡಪಾಡಿ ಗ್ರಾಮದ, ಪಾಲ್ತಾಡು ನಿವಾಸಿ ಪಿ.ಸಿ.ಜಯರಾಮ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಸದಸ್ಯರನ್ನಾಗಿ ದಕ್ಷಿಣ ಕನ್ನಡ ಜಿಲ್ಲೆಯವರಾದ ಮಾಧವ ಗೌಡ, ತಿರುಮಲೇಶ್ವರಿ, ಚಿದಾನಂದ ಬೈಲಾಡಿ, ಯತೀಶ್ ಕುಮಾರ್, ಪರಶುರಾಮ ಚಿಲ್ತಾಡ್ಕ, ಕೆ.ಟಿ.ವಿಶ್ವನಾಥ್, ಶ್ವೇತಾ ಮಡಪಾಡಿ, ಶರೀಫ್, ಎ.ಕೆ.ಹಿಮಕರ, ಮಡಿಕೇರಿಯ ದೇವರಾಜ್, ಬಾರಿ ಯಂಡ ಜೋಯಪ್ಪ ಹಾಗೂ ಕಡ್ಲೆರಾ ತುಳಸಿ ಮೋಹನ ಅವರನ್ನು ನೇಮಿಸಲಾಗಿದೆ.