×
Ad

ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯಗೆ ಪುತಿನ ಸಾಹಿತ್ಯ ಪ್ರಶಸ್ತಿ

Update: 2017-12-15 18:37 IST

ಬೆಂಗಳೂರು, ಡಿ.15: ಸಾಹಿತಿ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಅವರಿಗೆ 2016 ನೆ ಸಾಲಿನ ಪುತಿನ ಸಾಹಿತ್ಯ ಪ್ರಶಸ್ತಿ ಹಾಗೂ ನಾಗರಾಜ ವಸ್ತಾರೆ ಅವರಿಗೆ ಪುತಿನ ಕಾವ್ಯ-ನಾಟಕ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪುತಿನ ಟ್ರಸ್ಟ್‌ನ ಅಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶಮೂರ್ತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದಿಂದ ಪುತಿನ ಟ್ರಸ್ಟ್ ವತಿಯಿಂದ ಕನ್ನಡದ ಹಿರಿಯ ಲೇಖಕರಿಗೆ ಜೀವಮಾನದ ಸಾಧನೆಗಾಗಿ ವಿಶೇಷ ಪುರಸ್ಕಾರ ನೀಡುವ ಯೋಜನೆ ರೂಪಿಸಲಾಗಿದೆ. ಅದರಂತೆ ಇವರಿಬ್ಬರಿಗೂ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಸಾಹಿತ್ಯ ಪುರಸ್ಕಾರ 51 ಸಾವಿರ ರೂ.ಗಳ ನಗದು ಮತ್ತು ಕಾವ್ಯ-ನಾಟಕ ಪ್ರಶಸ್ತಿ 25 ಸಾವಿರ ರೂ.ಗಳ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದು ಹೇಳಿದರು.

ಪುರಸ್ಕಾರವನ್ನು ಡಿ.24 ರಂದು ನಗರದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದು, ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥರಾವ್ ಹಾಗೂ ಕವಿ ಎಚ್.ಡುಂಡಿರಾಜ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News