ಆಹಾರ ಪೋಲು ವಿರುದ್ಧ ಕ್ರಮ ಅನಿವಾರ್ಯ

Update: 2017-12-15 18:49 GMT

ಮಾನ್ಯರೇ,

ರಾಜ್ಯದಲ್ಲಿ ಆಹಾರ ಪೋಲು ಪ್ರಕರಣ ಹೆಚ್ಚಾಗುತ್ತಿದೆ. ಆದರೆ ಈವರೆಗೆ ಇದನ್ನು ಯಾರೂ ಗಂಭೀರ ಪ್ರಕರಣವೆಂದು ಪರಿಗಣಿಸಿರಲಿಲ್ಲ. ಮದುವೆ ಇತ್ಯಾದಿ ಔತಣ ಪಾರ್ಟಿಯಲ್ಲದೆ, ಖಾಸಗಿ ಹಾಗೂ ಸರಕಾರಿ ಸಮಾರಂಭಗಳಲ್ಲಿ ವಾರ್ಷಿಕವಾಗಿ ಸಾವಿರರಾರು ಟನ್‌ಗಳಷ್ಟು ಆಹಾರ ಪೋಲಾಗುತ್ತಿರುವ ವಿಚಾರ ಸಮೀಕ್ಷೆಯೊಂದರಲ್ಲಿ ಬಯಲಾಗಿದೆ.

  
ಇಂತಹ ಸಮಾರಂಭಗಳಲ್ಲಿ ವೇಳೆ ಉಳಿದ ಆಹಾರವನ್ನು ಹಸಿದವರಿಗೆ ತಲುಪಿಸಿದವರು ಬಹಳ ಕಡಿಮೆ. ಆಹಾರ ಪೋಲು ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇ ಬೇಕಾದ ರಾಜ್ಯ ಸರಕಾರ ಶೀಘ್ರವೇ ಆಹಾರ ಪೋಲು ನಿಯಂತ್ರಣ ವಿಧೇಯಕವನ್ನು ಜಾರಿಗೆ ತರಬೇಕು. ಇದು ಕಾಲದ ಅನಿವಾರ್ಯತೆ ಕೂಡಾ ಹೌದು. ಈ ಮೂಲಕ ಉಳ್ಳವರ ಸ್ವೇಚ್ಛಾಚಾರದ ಸಂಸ್ಕೃತಿಗೆ ಕಡಿವಾಣ ಬೀಳಬೇಕು. ಹಸಿದವರ ಹೊಟ್ಟೆ ನಿರಾಳವಾಗಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ನಡೆಸಬೇಕಾಗಿದೆ. ಈ ಕಾರ್ಯಾಚರಣೆ ಪಂಚಾಯತ್‌ಮಟ್ಟದಿಂದಲೇ ನಡೆಯಬೇಕು. ಈ ಕುರಿತು ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಟ್ಟು ರಕ್ಷಣೆ ನೀಡಬೇಕು. ಈ ಮೂಲಕ ಆಹಾರ ಪೋಲು ಮಾಡುವವರಿಗೆ ಪಾಠಕಲಿಸಬೇಕು. 

Writer - - ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - - ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News