ಭಾರತದ ಜೂನಿಯರ್ ಬಾಕ್ಸರ್‌ಗಳಿಗೆ ಆರು ಚಿನ್ನ

Update: 2017-12-18 18:35 GMT

ಹೊಸದಿಲ್ಲಿ, ಡಿ.18: ಐದನೇ ಆವೃತ್ತಿಯ ಸ್ವೆನ್ ಲ್ಯಾಂಜ್ ಸ್ಮಾರಕ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಭಾರತದ ಜೂನಿಯರ್ ಬಾಕ್ಸರ್‌ಗಳು 6 ಚಿನ್ನ, 4 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿ ಸಾಹಸ ಮೆರೆದಿದ್ದಾರೆ.

ಜರ್ಮನಿಯಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಭಾವೇಶ್ ಕಟ್ಟಮನಿ(52 ಕೆ.ಜಿ.) ಚಿನ್ನದ ಪದಕದ ಜೊತೆಗೆ ಶ್ರೇಷ್ಠ ಬಾಕ್ಸರ್ ಟ್ರೋಫಿ ಜಯಿಸಿದ್ದಾರೆ.

ಭಾರತದ ಪರ ವಿಜಯದೀಪ್(63 ಕೆ.ಜಿ.), ಅಕ್ಷಯ್(60 ಕೆ.ಜಿ.),ಐಶ್ ಪನ್ನು(70 ಕೆ.ಜಿ.), ಲಕ್ಷ ಚಹಾರ್(80 ಕೆ.ಜಿ.) ಹಾಗೂ ವಿನಿತ್(75 ಕೆ.ಜಿ.) ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

ಅನಿಲ್(48 ಕೆ.ಜಿ.), ಸ್ವಪ್ನಿಲ್ ಶಿಂಧೆ(50 ಕೆ.ಜಿ.), ಅಮಾನ್(54 ಕೆ.ಜಿ.) ಹಾಗೂ ಸತೇಂದರ್ ಬೆಳ್ಳಿ ಪದಕ ಜಯಿಸಿದರು. ಆಕಾಶ್ 66 ಕೆ.ಜಿ.ವಿಭಾಗದಲ್ಲಿ ಭಾರತಕ್ಕೆ ಏಕೈಕ ಕಂಚು ಗೆದ್ದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News