ಡೋಪಿಂಗ್ ಪರೀಕ್ಷೆಯಲ್ಲಿ ಚಾನು ಉತ್ತೀರ್ಣ

Update: 2017-12-18 18:38 GMT

ಹೊಸದಿಲ್ಲಿ, ಡಿ.18: ವಿಶ್ವ ಚಾಂಪಿಯನ್‌ಶಿಪ್‌ನ ಚಾಂಪಿಯನ್ ಮಣಿಪುರದ ಮೀರಾಬಾಯಿ ಚಾನು ಕಳೆದ 4 ವರ್ಷಗಳಲ್ಲಿ 45 ಬಾರಿ ಉದ್ದೀಪನ ಮದ್ದು ಪರೀಕ್ಷೆಗೆ ಒಳಗಾಗಿದ್ದರು. ಎಲ್ಲ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ. ಈ ಹಿಂದೆ ಡೋಪಿಂಗ್ ಹಗರಣದಲ್ಲಿ ಸಿಲುಕಿ ಕಳಂಕಿತಗೊಂಡಿದ್ದ ವೇಟ್‌ಲಿಫ್ಟಿಂಗ್ ಕ್ರೀಡೆಗೆ ಮತ್ತೆ ಕಳಂಕ ಅಂಟದಂತೆ ಮಾಡಲು ಚಾನು ಮಹತ್ವದ ಕೊಡುಗೆ ನೀಡಿದ್ದಾರೆ.

ನ.30 ರಂದು ಅಮೆರಿಕದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಚಾನು ಚಿನ್ನದ ಪದಕ ಜಯಿಸಿದ್ದರು. ಈ ಮೂಲಕ ಭಾರತದ 22 ವರ್ಷಗಳ ಪದಕದ ಬರ ನೀಗಿಸಿದ್ದರು. 1994-1995ರಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಜಯಿಸಿದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ ಬಳಿಕ ಚಾನು 2 ದಿನಗಳಲ್ಲಿ ಎರಡು ಬಾರಿ ಡೋಪಿಂಗ್ ಪರೀಕ್ಷೆಗೆ ಒಳಗಾಗಿದ್ದಾರೆ.

 ‘‘ಕಳೆದ ಎರಡು ವರ್ಷಗಳಲ್ಲಿ ನಾನು ಹಲವು ಬಾರಿ ಡೋಪಿಂಗ್ ಪರೀಕ್ಷೆಗೆ ಒಳಗಾಗಿದ್ದೇನೆ. ನನ್ನ ಸ್ಯಾಂಪಲ್‌ನ್ನು ಕೇಳಿದ ತಕ್ಷಣ ಯಾವುದೇ ಹಿಂಜರಿಕೆಯಿಲ್ಲದೆ ಕೊಟ್ಟಿದ್ದೇನೆ. ನಾನು ಅಭ್ಯಾಸದತ್ತ ಗಮನ ನೀಡುತ್ತಿದ್ದು, ಮುಂದಿನ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಎದುರು ನೋಡುತ್ತಿರುವೆ’’ ಎಂದು ಚಾನು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News