ಚಂದ್ರನ ಅಂಗಳಕ್ಕೆ ಕಾಲಿಟ್ಟ ಲೂನಾ 3 ನೌಕೆ 1

Update: 2017-12-23 18:50 GMT

593: ನೆದರ್ಲೆಂಡ್‌ನ ಟೆಕ್ಸೆಲ್‌ನಲ್ಲಿ ಬೀಸಿದ ಭೀಕರ ಬಿರುಗಾಳಿಗೆ 40 ಹಡಗುಗಳು ಸಮುದ್ರದಲ್ಲಿ ಮುಳುಗಿದವು. ಸುಮಾರು 500 ಜನರು ಸಾವಿಗೀಡಾದರು.

1777: ಕಿರಿಟಿಮತಿ ಅಥವಾ ಕ್ರಿಸ್‌ಮಸ್ ದ್ವೀಪಪ್ರದೇಶ ಎಂದು ಎಂದು ಕರೆಯಲಾಗುವ ಪ್ರದೇಶವನ್ನು ಶೋಧಕ ಜೇಮ್ಸ್ ಕುಕ್ ಸಂಶೋಧಿಸಿದನು.

1933: ಪ್ಯಾರಿಸ್‌ನಲ್ಲಿ ಎಕ್ಸ್‌ಪ್ರೆಸ್ ರೈಲೊಂದು ಹಳಿತಪ್ಪಿದ ಪರಿಣಾಮ 160 ಜನ ಸಾವನ್ನಪ್ಪಿದರು. 300 ಜನ ಗಾಯಗೊಂಡರು.
1936: ಪ್ರಥಮ ವಿಕಿರಣಶೀಲ ಐಸೋಟೋಪ್ ಔಷಧಿಯನ್ನು ಕ್ಯಾಲಿಫೋರ್ನಿಯಾದ ಬರ್ಕ್‌ಲಿ ಎಂಬಲ್ಲಿ ಪ್ರಯೋಗಿಸಲಾಯಿತು.

1942: ಸೋವಿಯತ್ ರಶ್ಯಾದ ಕೆಂಪು ಸೈನ್ಯವು ಜರ್ಮನಿಯ ತಾಸ್‌ಜಿನ್‌ಸ್ಕಜಾ ಮತ್ತು ಮಾರೋಜಾವ್ಸ್ ವಿಮಾನ ನಿಲ್ದಾಣಗಳನ್ನು ವಶಪಡಿಸಿಕೊಂಡಿತು.

1966: ಸೋವಿಯತ್ ಒಕ್ಕೂಟದ ಬಾಹ್ಯಾಕಾಶ ನೌಕೆ ಲೂನಾ 3 ಚಂದ್ರನ ಅಂಗಳಕ್ಕೆ ಕಾಲಿಟ್ಟಿತು.

1967: ಚೀನಾವು ಇಂದು ಲಾಪ್ ನೋರ್ ಎಂಬಲ್ಲಿ ಪರಮಾಣು ಬಾಂಬ್ ಪರೀಕ್ಷೆ ನಡೆಸಿತು.

2012: ಚೀನಾದ ಜಿಯಾಂಗ್‌ಕ್ಷಿ ಎಂಬಲ್ಲಿ ಶಿಶುವಿಹಾರದ ಮಕ್ಕಳನ್ನು ಹೊತ್ತ ವ್ಯಾನೊಂದು ಸರೋವರಕ್ಕೆ ಬಿದ್ದ ಪರಿಣಾಮ 11 ಮಕ್ಕಳು ಅಸುನೀಗಿದರು.

1956: ಬಾಲಿವುಡ್‌ನ ಖ್ಯಾತ ನಟ ಅನಿಲ್ ಕಪೂರ್ ಜನ್ಮದಿನ.

1973: ದ್ರಾವಿಡ, ದಲಿತ ಚಳವಳಿಗಳ ಪ್ರಮುಖ ನೇತಾರ, ಚಿಂತಕ ಪೆರಿಯಾರ್ ಇಂದು ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ