ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಭೇಟಿಯಾದ ದಿನಕರನ್
Update: 2017-12-28 19:56 IST
ಬೆಂಗಳೂರು, ಡಿ.28: ಎಐಎಡಿಎಂಕೆ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಬಂಧಿಯಾಗಿರುವ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶಾಸಕ ಟಿ.ಟಿ.ವಿ ದಿನಕರನ್ ನೀಡಿ ಮಾತುಕತೆ ನಡೆಸಿದರು.
ಗುರುವಾರ ಮಧ್ಯಾಹ್ನ 12:30 ಸುಮಾರಿಗೆ ದಿನಕರನ್ ಅವರು ಇಬ್ಬರು ಸಂಬಂಧಿ ಹಾಗೂ ವಕೀಲರ ಜತೆ ಪರಪ್ಪನ ಅಗ್ರಹಾರದ ವಿಶೇಷ ಕೊಠಡಿಯಲ್ಲಿ ಶಶಿಕಲಾರನ್ನು ಭೇಟಿ ಮಾಡಿದರು.
ಇತ್ತೀಚೆಗೆ ನಡೆದ ತಮಿಳುನಾಡಿನ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರೀ ಮತಗಳಿಂದ ದಿನಕರನ್ ಜಯಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ಜೈಲಿನಲ್ಲಿ ಶಶಿಕಲಾರನ್ನು ಭೇಟಿ ಮಾಡಿ ತಮಿಳುನಾಡಿನ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಸಿಹಿ ಹಂಚಿಕೆ: ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಶಿಕಲಾ ಅವರಿಗೆ ಟಿಟಿವಿ ದಿನಕರನ್ ಅವರು ಸಿಹಿ ನೀಡಿ ಸಂಭ್ರಮಿಸಿದರು ಎಂದು ತಿಳಿದುಬಂದಿದೆ.