ಬೆಂಗಳೂರು:ಜಾಹೀರಾತು ನೀಡಿ ವಂಚನೆ; ಆರೋಪಿ ಬಂಧನ
ಬೆಂಗಳೂರು, ಡಿ.30: ಓಎಲ್‌ಎಕ್ಸ್ ಜಾಹೀರಾತು ನೋಡಿ ಮೋಜಿಗಾಗಿ ಬೈಕ್ ಮತ್ತು ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ಪುನೀತ್‌ಕುಮಾರ್(23) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಧ ಕಂಪೆನಿಗೆ ಸೇರಿದ ಬೈಕ್‌ಗಳನ್ನು ನಗರದ ವಿವಿಧ ಕಡೆಗಳಲ್ಲಿ ಓಎಲ್‌ಎಕ್ಸ್ ಜಾಹೀರಾತುದಾರರನ್ನು ಸಂಪರ್ಕಿಸಿ ಟೆಸ್ಟ್ ಡ್ರೈವ್ ನೆಪದಲ್ಲಿ ಮಾಲಕರನ್ನು ನಂಬಿಸಿ, ಬೈಕ್‌ಗಳನ್ನು ಪಡೆದು ಜಾಲಿರೈಡ್ ಮಾಡಿಕೊಂಡು ಮೋಜುಮಸ್ತಿ ಮಾಡುತ್ತಿದ್ದನು ಎನ್ನಲಾಗಿದೆ.
ಆರೋಪಿಯಿಂದ 5ಬೈಕ್, 3 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈತನ ಬಂಧನದಿಂದ 8 ಪ್ರಕರಣಗಳನ್ನು ಪತ್ತೆಹಚ್ಚಿದಂತಾಗಿದೆ. ಈ ಪತ್ತೆಕಾರ್ಯವನ್ನು ಕೇಂದ್ರ ಭಾಗದ ಡಿಸಿಪಿ ಡಾ.ಚಂದ್ರಗುಪ್ತ ಮತ್ತು ಕಬ್ಬನ್‌ಪಾರ್ಕ್ ಉಪಭಾಗದ ಎಸಿಪಿ ಮಂಜುನಾಥ್ ಮಾರ್ಗದರ್ಶನದಂತೆ ಇನ್ಸ್‌ಪೆಕ್ಟರ್ ವಿಜಯ್ ಹಡಗಲಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಿದ್ದರು ಎಂದು ತಿಳಿದುಬಂದಿದೆ.