×
Ad

ಬೆಂಗಳೂರು: ಏಕಶಿಲಾ ಕೋರೆಗಾಂವ್ ಸ್ತಂಭ ಡಿ.31ಕ್ಕೆ ಲೋಕಾರ್ಪಣೆ

Update: 2017-12-30 19:50 IST

ಬೆಂಗಳೂರು, ಡಿ.30: ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ 24 ಅಡಿ ಎತ್ತರದ ಏಕಶಿಲಾ ಕೋರೆಗಾಂವ್ ಸ್ತಂಭ ಇದೇ ಡಿ.31ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ದೂರ ಶಿಕ್ಷಣ ನಿರ್ದೇಶಕ ಮೈಲಾರಪ್ಪತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಶ್ವೆ ಬಾಜಿರಾಯನ ವಿರುದ್ಧ ಯುದ್ಧ ಮಾಡಿದ ಮಹರ್ ಸೈನಿಕರು ಕೋರೆಗಾಂವ್‌ನಲ್ಲಿ ವಿಜಯ ಸಾಧಿಸಿದ್ದರು. ಡಿ.31ಕ್ಕೆ ಅವರ ತ್ಯಾಗ ಹಾಗೂ ಬಲಿದಾನಕ್ಕೆ 200 ವರ್ಷಗಳು ತುಂಬಲಿದೆ ಎಂದು ತಿಳಿಸಿದರು.

ಸದ್ಯಕ್ಕೆ ಈ ಮಾದರಿಯ ಸ್ತಂಭ ಕೇವಲ ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿದೆ. ಈಗ ನಮ್ಮ ವಿಶ್ವವಿದ್ಯಾಲಯದಲ್ಲೂ ಅದನ್ನು ಕಾಣಬಹುದು ಎಂದರು.
ಬೆಳಗ್ಗೆ 10 ಗಂಟೆಗೆ ರಾಜ್ಯ ಮಟ್ಟದ ವಿಚಾರ ಸಂಕಿರಣ, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ನಾಡಿನ ಪ್ರಗತಿಪರರು, ಬರಹಗಾರರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಿ.ಚಂದ್ರಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News