ಜ.12ರಂದು ಬೆಂಗಳೂರು ಚಲೋ
ಬೆಂಗಳೂರು, ಜ. 2: ವಡ್ಡ, ಲಮಾಣಿ, ಕೊರಮ, ಕೊರಚ, ಜನಾಂಗವನ್ನು ಓಬಿಸಿಯಿಂದ ತೆಗೆದು ಎಸ್ಸಿ ಜನಾಂಗಕ್ಕೆ ಸೇರಿಸಿರುವ ಹೈಕೋರ್ಟ್ ತೀರ್ಪನ್ನು ರಾಜ್ಯ ಸರಕಾರ ಜಾರಿಗೊಳಿಸುವಂತೆ ಒತ್ತಾಯಿಸಿ ಡಾ.ಅಂಬೇಡ್ಕರ್ ಪೀಪಲ್ ಪಾರ್ಟಿ ಜ.12ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದೆ.
ಮಂಗಳವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಡಾ.ಅಂಬೇಡ್ಕರ್ ಪೀಪಲ್ ಪಾರ್ಟಿ ಸಂಸ್ಥಾಪಕ ದೇವಮಿತ್ರ ಮಾತನಾಡಿ, ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ವಡ್ಡ, ಲಮಾಣಿ, ಕೊರಮ, ಕೊರಚ, ಜನಾಂಗಕ್ಕೆ ರಾಜಕೀಯ, ಆರ್ಥಿಕ, ನಾಗರಿಕ ಸೇವೆಗಳಿಂದ ವಂಚಿಸಲಾಗಿದೆ ಎಂದು ಆರೋಪಿಸಿದ ಅವರು, ಸಂವಿಧಾನದ 1950ರ ಆದೇಶದ ವಿರುದ್ಧ ಎಸ್ಸಿ ಪಟ್ಟಿಗೆ ಸೇರ್ಪಡೆಗೊಳಿಸಿ, ಎಸ್ಸಿ ಸಮುದಾಯಕ್ಕೆ ಸಿಗಬೇಕಾದ ಪ್ರಾತಿನಿಧ್ಯಗಳನ್ನು ಕಸಿದುಕೊಂಡಂತಾಗಿದೆ ಎಂದರು.
ವಡ್ಡ, ಲಮಾಣಿ, ಕೊರಮ, ಕೊರಚ, ಸಮುದಾಯಕ್ಕೆ ಆರ್ಥಿಕ, ಸಾಮಾಜಿಕ ರಾಜಕೀಯವಾಗಿ ಪ್ರಾತಿನಿಧ್ಯಕ್ಕಾಗಿ ಹೈಕೋರ್ಟ್ ತೀರ್ಪನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ, ಜ.12ರಂದು, ಜಿಲ್ಲಾಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹಾಗೂ ಬೆಂಗಳೂರು ಚಲೋ ನಡೆಸಿ ರಾಜ್ಯಪಾಲರಿಗೆ ಮನವಿ ನೀಡಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾರುತಿರಾವ್ ಜಂಬಗ, ಮಹೇಂದ್ರ ಮಿತ್ರ, ಕೃಷ್ಣ ಸೇರಿದಂತೆ ಪಕ್ಷದ ಪ್ರಮುಖರಿದ್ದರು.