×
Ad

ಪ್ರಧಾನಿ ಮನಸ್ಸು ಮಾಡಿದರೆ ಐದು ನಿಮಿಷದಲ್ಲಿ ಮಹಾದಾಯಿ ಸಮಸ್ಯೆ ಇತ್ಯರ್ಥ : ಅಂಬರೀಶ್

Update: 2018-01-02 19:02 IST

ಬೆಂಗಳೂರು, ಜ.2: ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾಡಿದರೆ ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ಉದ್ಭವಿಸಿರುವ ಸಮಸ್ಯೆ ಐದು ನಿಮಿಷದಲ್ಲಿ ಇತ್ಯರ್ಥವಾಗುತ್ತದೆ ಎಂದು ಮಾಜಿ ಸಚಿವ ಅಂಬರೀಶ್ ಅಭಿಪ್ರಾಯಪಟ್ಟರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದವರು ಭಾರತೀಯರಲ್ಲವೇ? ಸ್ವಾರ್ಥ ಬಿಟ್ಟರೆ ಮಹಾದಾಯಿ ಸಮಸ್ಯೆ ಪರಿಹಾರವಾಗುತ್ತದೆ ಎಂದರು.

ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪವಾದಾಗ ಅಲ್ಲಿಗೆ ಭೇಟಿ ನೀಡಿದ್ದ ನರೇಂದ್ರಮೋದಿ, ಅಲ್ಲಿನ ಜನತೆಗೆ ನಾನಿದ್ದೇನೆ ಎಂದು ಭರವಸೆ ನೀಡಿದ್ದರು. ಆದರೆ, ನಮ್ಮ ರಾಜ್ಯಕ್ಕೆ ಅವರಿಂದ ಅಂತಹ ಯಾವುದೆ ಭರವಸೆ ಈವರೆಗೆ ಸಿಕ್ಕಿಲ್ಲ. ತಮಿಳುನಾಡಿನಲ್ಲಿ ಎಷ್ಟು ಬಿಜೆಪಿ ಸಂಸದರಿದ್ದಾರೆ. ಕರ್ನಾಟಕದಲ್ಲಿ ಎಷ್ಟು ಬಿಜೆಪಿ ಸಂಸದರಿದ್ದಾರೆ ಎಂದು ಅಂಬರೀಶ್ ಪ್ರಶ್ನಿಸಿದರು.

ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಂಬರೀಶ್, ರಾಜಕೀಯ ಕ್ಷೇತ್ರದಲ್ಲಿ ರಜನಿ ಗೆಲುವು ನಿಶ್ಚಿತ. ನಾನು ಪ್ರತಿ ದಿನ ಅವರೊಂದಿಗೆ ಮಾತನಾಡುತ್ತೇನೆ. ಆದರೆ, ರಾಜಕೀಯ ವಿಚಾರಗಳನ್ನಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News