×
Ad

ಬೆಂಗಳೂರು: ಸಾವಿತ್ರಿ ಬಾಪುಲೆ ಅಧ್ಯಯನ ಪೀಠ ಸ್ಥಾಪಿಸಲು ವೆಂಕಟಸ್ವಾಮಿ ಒತ್ತಾಯ

Update: 2018-01-03 18:42 IST

ಬೆಂಗಳೂರು, ಜ.3: ಹೆಣ್ಣು ಮಕ್ಕಳಿಗೆ ಮೊದಲ ಶಿಕ್ಷಣ ಕಲಿಸಿದ ಸಾವಿತ್ರಿ ಬಾಪುಲೆ ಹೆಸರಿನಲ್ಲಿ ರಾಜ್ಯದ ಎಲ್ಲ ವಿವಿಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಸಮತಾ ಸೈನಿಕಾ ದಳದ ಅಧ್ಯಕ್ಷ ಡಾ.ವೆಂಕಟಸ್ವಾಮಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಬುಧವಾರ ಸಮತಾ ಸೈನಿಕ ದಳ ನಗರದಲ್ಲಿ ಸಾವಿತ್ರಿ ಬಾಪುಲೆರವರ 187 ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಮಹಿಳಾ ಸಮುದಾಯಕ್ಕೆ ಮೊದಲು ಶಿಕ್ಷಣ ನೀಡಿದ ಸಾವಿತ್ರಿ ಬಾಪುಲೆರವರ ಆದರ್ಶಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು. ಹೀಗಾಗಿ ವಿವಿಗಳಲ್ಲಿ ಸಾವಿತ್ರಿ ಬಾಪುಲೆ ಕುರಿತು ಅಧ್ಯಯನ ಪೀಠಗಳು ಸ್ಥಾಪನೆಯಾಗುವ ಅಗತ್ಯವಿದೆ ಎಂದು ತಿಳಿಸಿದರು.

ದೇಶದಲ್ಲಿ ನೂರಾರು ವರ್ಷಗಳವರೆಗೆ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಶಿಕ್ಷಣ ಇತ್ತು. ಇದರಿಂದಾಗಿ ದೇಶದ ಬಹುಜನರು ಶೋಷಿತರಾಗಿ ಬಾಳುವಂತಾಗಿತ್ತು. ಇದನ್ನು ಮನಗಂಡ ಜ್ಯೋತಿ ಬಾಪುಲೆ ಅವಿರತವಾಗಿ ಹೋರಾಟ ಮಾಡಿ ಹಿಂದುಳಿದ, ದಲಿತ ಹಾಗೂ ಮಹಿಳೆಯರಿಗೆ ಶಿಕ್ಷಣವನ್ನು ನೀಡುವ ಮೂಲಕ ಅಕ್ಷರ ಕ್ರಾಂತಿ ಮಾಡಿದರು ಎಂದು ಅವರು ಸ್ಮರಿಸಿದರು.

ಪ್ರಗತಿಪರರು, ಪರಿಸರವಾದಿ ಹಾಗೂ ಸಮಾಜ ಪರಿವರ್ತಕರು ಯುವ ಜನತೆಗೆ ಮಾದರಿಯಾಗಬೇಕು. ಆ ನಿಟ್ಟಿನಲ್ಲಿ ಜ್ಯೋತಿ ಬಾಪುಲೆರವರ ಜನ್ಮ ದಿನವನ್ನು ಸಮಾನ ಶಿಕ್ಷಣ ದಿನವನ್ನಾಗಿ ಘೋಷಿಸಬೇಕೆಂದು ಅವರು ಒತ್ತಾಯಿಸಿದರು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐದು ಮಂದಿ ಮಹಿಳೆಯರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News