×
Ad

ಕಾರು ಚಕ್ರ ಕಳವು ಪ್ರಕರಣ: ಮೂವರ ಬಂಧನ

Update: 2018-01-03 18:52 IST

ಬೆಂಗಳೂರು, ಜ.3: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಇಲ್ಲಿನ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ನರೇಶ್‌ಬಾಬು(23), ಕಾಂತರಾಜು(22) ಮತ್ತು ಮೋಹನ್‌ಕುಮಾರ್(22) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.

ಪ್ರಕರಣದ ವಿವರ: ಹೊಸ ವರ್ಷಾಚರಣೆ ನಿಮಿತ್ತ ಭದ್ರಪ್ಪಬಡಾವಣೆಯ ಸಮೀಪ ಪೊಲೀಸರು ವಾಹನ ತಪಾಸಣೆ ನಡೆಸಿದಾಗ, ಕಾರಿನಲ್ಲಿ ಅನುಮಾನಾಸ್ಪದವಾಗಿ ವಿವಿಧ ಕಾರುಗಳಿಗೆ ಸಂಬಂಧಪಟ್ಟ ಚಕ್ರಗಳನ್ನು ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.

ಬಳಿಕ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕಾರಿನ ಚಕ್ರಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇವರ ಬಂಧನದಿಂದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ 5 ಪ್ರಕರಣಗಳು ಪತ್ತೆಯಾಗಿದ್ದು, ಸಹಕಾರನಗರ, ಕೇಂದ್ರಬ್ಯಾಂಕ್ ಲೇಔಟ್ ವ್ಯಾಪ್ತಿಯಲ್ಲಿ 6 ಕಾರಿನ ಚಕ್ರಗಳನ್ನು ಬಿಚ್ಚಿದ್ದ ಐದು ಪ್ರಕರಣಗಳು ಪತ್ತೆಯಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News