×
Ad

ವೇಶ್ಯಾವಾಟಿಕೆ ದಂಧೆ: ಮಹಿಳೆ ಸೆರೆ

Update: 2018-01-03 18:59 IST

ಬೆಂಗಳೂರು, ಜ.3: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಅಪಾರ್ಟ್‌ಮೆಂಟ್‌ವೊಂದಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.

ಮಲ್ಲೇಶ್ವರಂ ವ್ಯಾಪ್ತಿಯ 18ನೆ ಕ್ರಾಸ್, 8ನೆ ಮುಖ್ಯರಸ್ತೆಯಲ್ಲಿನ ನಿಸರ್ಗ ಅಪಾರ್ಟ್‌ಮೆಂಟ್‌ನ 2ನೆ ಮಹಡಿಯ ರೇಣುಕಾ ಯಾನೆ ಸೌಮ್ಯಾ ಗಣೇಶ್ ರಾವ್(55) ಬಂಧಿತ ಮಹಿಳೆ ಎಂದು ಸಿಸಿಬಿ ತಿಳಿಸಿದೆ.

ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಲಾಗಿತ್ತು. ಪ್ರಕರಣ ಸಂಬಂಧ ಇಬ್ಬರು ಯುವತಿಯರನ್ನು ರಕ್ಷಿಸಿರುವ ಪೊಲೀಸರು, ಆರೋಪಿಯಿಂದ 2 ಸಾವಿರ ನಗದು, ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ನಗರದ ವಿವಿಧ ಭಾಗಗಳಿಂದ ಯುವತಿಯರನ್ನು ಮಾನವ ಸಾಗಣೆ ಮಾಡಿಕೊಂಡು ಬಂದು ಹೆಚ್ಚು ಹಣ ನೀಡುವ ಆಮಿಷ ತೋರಿಸಿ ವೇಶ್ಯಾವಾಟಿಕೆ ನಡೆಸಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News