ಪಾಕಿಸ್ತಾನಕ್ಕೆ ಭದ್ರತಾ ನೆರವು ತಡೆಹಿಡಿದ ಅಮೆರಿಕ

Update: 2018-01-05 04:02 GMT

ವಾಷಿಂಗ್ಟನ್, ಜ. 5: ಪಾಕಿಸ್ತಾನಕ್ಕೆ ನೀಡುತ್ತಿದ್ದ ಭದ್ರತಾ ನೆರವನ್ನು ತಕ್ಷಣದಿಂದ ತಡೆಹಿಡಿಯಲಾಗಿದೆ ಎಂದು ಅಮೆರಿಕ ಪ್ರಕಟಿಸಿದೆ.

ನೆರೆಯ ಅಪ್ಘಾನಿಸ್ತಾನದಲ್ಲಿ ಅಮೆರಿಕದ ಪಡೆಗಳನ್ನು ಗುರಿಯಾಗಿ ಇರಿಸಿಕೊಂಡಿರುವ ತಾಲಿಬಾಲ್ ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತ ಭವನ ಘೋಷಿಸಿದೆ.

ಭಯೋತ್ಪಾದಕ ಜಾಲ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಮಾಡಿದ್ದ ಅಮೆರಿಕ ಇದೀಗ ನೆರವು ತಡೆಹಿಡಿಯುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದೆ. ಆದರೆ ಎಷ್ಟು ಪ್ರಮಾಣದ ಹಣಕಾಸು ನೆರವು ಮತ್ತು ಶಸ್ತ್ರಾಸ್ತ್ರಗಳನ್ನು ತಡೆಹಿಡಿಯಲಾಗಿದ ಎನ್ನುವುದು ತಕ್ಷಣಕ್ಕೆ ಬಹಿರಂಗವಾಗಿಲ್ಲ. ಪಾಕಿಸ್ತಾನ ಅಮೆರಿಕವನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದು ಹೊಸ ವರ್ಷದ ದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಇದಕ್ಕೆ ಪೂರಕವಾಗಿ ಇದೀಗ ನೆರವು ತಡೆ ಹಿಡಿಯಲಾಗಿದೆ.

ಪಾಕಿಸ್ತಾನ ಅಮೆರಿಕದಿಂದ 255 ದಶಲಕ್ಷ ಡಾಲರ್‌ಗಿಂತಲೂ ಅಧಿಕ ವೆಚ್ಚದಲ್ಲಿ ಖರೀದಿಸಲು ಉದ್ದೇಶಿಸಿದ್ದ ನಿರ್ಬಂಧವನ್ನು ತಡೆಹಿಡಿಯಲಾಗಿತ್ತು ಎಂದು ವಕ್ತಾರ ಹೇತರ್ ನೌರತ್ ಹೇಳಿದ್ದಾರೆ. ಈಗ ತಡೆ ಹಿಡಿಯಲಾಗಿರುವ ನೆರವಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News