×
Ad

ಬೆಂಗಳೂರು: ಜ.13 ರಿಂದ ‘ಯುವೈಕ್ಯ’ ರಾಷ್ಟ್ರೀಯ ಸಮಾವೇಶ

Update: 2018-01-06 18:17 IST

ಬೆಂಗಳೂರು, ಜ.6: ಬಂಟರ ಸಂಘದ ಯುವ ವಿಭಾಗದ ವತಿಯಿಂದ ಜ.13 ಮತ್ತು 14 ರಂದು ಯುವೈಕ್ಯ 2018 ಎಂಬ ಯುವ ಬಂಟರ ರಾಷ್ಟ್ರೀಯ ಸಮಾವೇಶ ವನ್ನು ವಿಜಯನಗರದಲ್ಲಿರುವ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ವಿಭಾಗದ ಮುಖ್ಯಸ್ಥ ಪ್ರೇಮ್ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ದಿನಗಳ ಸಮಾವೇಶದಲ್ಲಿ ವಿವಿಧ ಕಂಪನಿಗಳಲ್ಲಿರುವ ಮಾನವ ಸಂಪನ್ಮೂಲ ಅಧಿಕಾರಿಗಳು, ವಿದ್ಯಾರ್ಥಿಗಳು, ಉದ್ಯಮಿಗಳು, ಉದ್ಯೋಗಿಗಳು ಸೇರಿದಂತೆ ಯುವಕ-ಯುವತಿಯರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ತಜ್ಞರ ಜತೆ ಸಂವಾದ, ನಿರ್ಣಯ ಗೋಷ್ಠಿ ನಡೆಯಲಿವೆ. ನಂತರ ಪ್ರತಿಭಾನ್ವಿತರಿಗೆ ಯುವೈಕ್ಯ ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು.

ಕರಾವಳಿಯ ಪ್ರಖ್ಯಾತ ಎಮ್ಮೆಕೆರೆ ತಂಡದ ಕಲಾವಿದರಿಂದ ಹುಲಿ ಕುಣಿತ, ಮೂಲ್ಕಿ ಸುವರ್ಣ ಆರ್ಟ್ಸ್ ಕಲಾವಿದರಿಂದ ಕರಾವಳಿ ವೈಭವ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ ಕುಮಾರ್, ಪದ್ಮಭೂಷಣ ಡಾ.ಬಿ.ಎಂ.ಹೆಗ್ಡೆ, ಸಚಿವರಾದ ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಸಂಸದ ನಳೀನ್ ಕುಮಾರ್ ಕಟೀಲು, ಶಾಸಕರಾದ ಶಕುಂತಲಾ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಜೆ.ಸಂತೋಷ್ ಶೆಟ್ಟಿ, ಅಧ್ಯಕ್ಷ ಡಿ.ಚಂದ್ರಹಾಸ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News