×
Ad

​ಆದಿಚುಂಚನಗಿರಿ ಮಠಕ್ಕೆ ಆದಿತ್ಯನಾಥ್ ಭೇಟಿ

Update: 2018-01-07 19:19 IST

ಬೆಂಗಳೂರು, ಜ.7: ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರು ನಗರಕ್ಕೆ ಆಗಮಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕೆಂಗೇರಿ ಸಮೀಪದ ಕುಂಬಳಗೋಡಿನಲ್ಲಿರುವ ಆದಿಚುಂಚನಗಿರಿ ಮಹಾಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಳನ್ನು ನೆರವೇರಿಸಿದರು.

ನಿನ್ನೆ ರಾತ್ರಿ ಉತ್ತರ ಪ್ರದೇಶದ ಲಕ್ನೋದಿಂದ ವಿಶೇಷ ಮಾನದಲ್ಲಿ ಎಚ್‌ಎಎಲ್ ನಿಲ್ದಾಣಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್ ಅವರು, ನೇರವಾಗಿ ಕುಂಬಳಗೋಡಿನ ಆದಿಚುಂಚನಗಿರಿ ಮಠಕ್ಕೆ ತೆರಳಿ ವಿಶ್ರಾಂತಿ ಗೃಹದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. ಯೋಗಾಸನದೊಂದಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಆರಂಭಿಸಿದ ಆದಿತ್ಯನಾಥ್, ಬೆಳಗಿನಜಾವ 5 ಗಂಟೆಗೆ ಮಹಾಮಠದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ.ನಿರ್ಮಲಾನಂದ ಮಹಾಸ್ವಾಮಿ, ಪ್ರಕಾಶನಾಥ ಸ್ವಾಮಿ ಉಪಸ್ಥಿತರಿದ್ದರು. ಉತ್ತರಪ್ರದೇಶ ಗೋರಖ್‌ಪುರಕ್ಕೂ ಆದಿಚುಂಚನಗಿರಿ ಪೀಠಕ್ಕೂ ಶತಶತಮಾನಗಳಿಂದಲೂ ಅವಿನಾಭಾವ ಸಂಬಂಧದೆ. ಎರಡು ಮಠಗಳು ನಾಥ ಸಂಪ್ರದಾಯವನ್ನು ಪಾಲನೆ ಮಾಡುತ್ತಿರುವುದು ವಿಶಿಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News