ಬಾಹ್ಯಾಕಾಶ ಲೋಕದ ದಿಗ್ಗಜ ಜಾನ್ ಯಂಗ್ ಇನ್ನಿಲ್ಲ

Update: 2018-01-07 16:31 GMT

ವಾಶಿಂಗ್ಟನ್, ಜ. 7: ಬಾಹ್ಯಾಕಾಶಕ್ಕೆ 6 ಬಾರಿ ಯಾತ್ರೆಗೈದ, ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಿದ ಹಾಗೂ ಚಂದ್ರನ ಮೇಲೆ ನಡೆದಾಡಿದ ಖಗೋಳಯಾನದ ದಂತಕತೆ ಜಾನ್ ಯಂಗ್ ನಿಧನರಾಗಿದ್ದಾರೆ ಎಂದು ನಾಸಾ ಘೋಷಿಸಿದೆ.

ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ನ್ಯುಮೋನಿಯದಿಂದಾಗಿ ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದರು ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಅವರು ಹ್ಯೂಸ್ಟನ್ ಉಪನಗರದಲ್ಲಿ ವಾಸಿಸುತ್ತಿದ್ದರು.

ಜೆಮಿನಿ, ಅಪೋಲೊ ಮತ್ತು ಬಾಹ್ಯಾಕಾಶ ನೌಕಾ ಕಾರ್ಯಕ್ರಮಗಳಲ್ಲಿ ಪ್ರಯಾಣಿಸಿದ ಏಕೈಕ ಗಗನಯಾತ್ರಿ ಅವರಾಗಿದ್ದಾರೆ. ಬಾಹ್ಯಾಕಾಶಕ್ಕೆ 6 ಬಾರಿ ಪ್ರಯಾಣಿಸಿದವರ ಪೈಕಿ ಮೊದಲಿಗರಾಗಿದ್ದಾರೆ.

ಯಂಗ್ ಅಪೋಲೊ 10 ನೌಕೆಯಲ್ಲಿ ಚಂದ್ರನಿಗೆ ಪ್ರದಕ್ಷಿಣೆ ಬಂದಿದ್ದಾರೆ ಹಾಗೂ ಅಪೋಲೊ 16 ನೌಕೆಯ ಮೂಲಕ ಚಂದ್ರನ ಮೇಲೆ ಇಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News