ಬಾಂಗ್ಲಾ ತಂಡದಲ್ಲಿ ಸೌಮ್ಯ ಸರ್ಕಾರ್‌ಗೆ ಸ್ಥಾನವಿಲ್ಲ

Update: 2018-01-07 19:00 GMT

ಢಾಕಾ, ಜ.7: ಮುಂಬರುವ ತ್ರಿಕೋನ ಏಕದಿನ ಅಂತಾರಾಷ್ಟ್ರೀಯ ಟೂರ್ನಮೆಂಟ್‌ಗೆ ಬಾಂಗ್ಲಾದೇಶ ತಂಡ ರವಿವಾರ 14 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದ್ದು, ಆರಂಭಿಕ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್ ಹಾಗೂ ವೇಗದ ಬೌಲರ್ ತಸ್ಕಿನ್ ಅಹ್ಮದ್‌ರನ್ನು ತಂಡದಿಂದ ಕೈಬಿಡಲಾಗಿದೆ. ಢಾಕಾದಲ್ಲಿ ಜ.15 ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಝಿಂಬಾಬ್ವೆ ಹಾಗೂ ಶ್ರೀಲಂಕಾ ತಂಡಗಳು ಭಾಗವಹಿಸಲಿವೆ. ಬಾಂಗ್ಲಾದೇಶ ಒಂದು ವರ್ಷದ ಬಳಿಕ ಸ್ವದೇಶದಲ್ಲಿ ಏಕದಿನ ಪಂದ್ಯವನ್ನು ಆಡಲಿದೆ. ‘‘ತಸ್ಕಿನ್ ಹಾಗೂ ಸೌಮ್ಯ ಅವರನ್ನು ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ತಂಡದಿಂದ ಕೈಬಿಡಲಾಗಿದೆ. ಇವರಿಬ್ಬರು ಬಿಸಿಎಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ’’ ಎಂದು ಮುಖ್ಯ ಆಯ್ಕೆಗಾರ ಅಬೆದಿನ್ ಹೇಳಿದ್ದಾರೆ.

2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಬಳಿಕ ಸೌಮ್ಯ ಎಲ್ಲ ಮೂರು ಮಾದರಿಯ ಪಂದ್ಯದಲ್ಲಿ ನಿರಂತರವಾಗಿ ಆಡಿದ್ದರು. ಆದರೆ, ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕ ಪ್ರವಾಸದ ವೇಳೆ ಕೇವಲ ಒಂದು ಏಕದಿನ ಪಂದ್ಯ ಆಡಿದ್ದು 8 ರನ್ ಗಳಿಸಿದ್ದರು.

ವೇಗದ ಬೌಲರ್ ತಸ್ಕಿನ್ ದಕ್ಷಿಣ ಆಫ್ರಿಕ ಪ್ರವಾಸದ ವೇಳೆ 3 ಏಕದಿನಗಳಲ್ಲಿ ಕೇವಲ 2 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಟೆಸ್ಟ್ ನಾಯಕ ಮುಶ್ಫಿಕುರ್ರಹೀಂ ಹಾಗೂ ಉಪ ನಾಯಕ ತಮೀಮ್ ಇಕ್ಬಾಲ್‌ಗೆ ತಂಡದಿಂದ ಹೊರಗಿಟ್ಟು ಕ್ರಮವಾಗಿ ಶಾಕಿಬ್ ಅಲ್ ಹಸನ್ ಹಾಗೂ ಮಹ್ಮೂದುಲ್ಲಾರನ್ನು ಆಯ್ಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News