×
Ad

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬಿಜೆಪಿ ಅಡ್ಡಗಾಲು: ದಲಿತ ಸಂಘಟನೆಗಳ ಪ್ರತಿಭಟನೆ

Update: 2018-01-08 17:56 IST

ಬೆಂಗಳೂರು, ಜ. 7: ರಾಜಾಜಿನಗರದ ದಯಾನಂದ ವಾರ್ಡ್‌ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಬಿಬಿಎಂಪಿ ಬಿಜೆಪಿ ಸದಸ್ಯೆ ಕುಮಾರಿ ಪಳನಿಕಾಂತ ಹಾಗೂ ಅವರ ಪತಿ ಅಡ್ಡಗಾಲು ಹಾಕುತ್ತಿರುವುದನ್ನು ವಿರೋಧಿಸಿ ರಾಮಕೃಷ್ಣ ಸೇವಾ ಅಸೋಸಿಯೇಷನ್ ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಸೋಮವಾರ ಸೇವಾನಗರದಲ್ಲಿ ಪ್ರತಿಭಟನೆ ನಡೆಸಿದರು. ವಾರ್ಡ್ ವ್ಯಾಪ್ತಿಯಲ್ಲಿ ಸಾಕಷ್ಟು ದಲಿತ ಸಮುದಾಯದವರು ವಾಸವಾಗಿದ್ದಾರೆ. ದಲಿತರಿಗೆ ಅಂಬೇಡ್ಕರ್ ಭವನದ ಅಗತ್ಯವಿದೆ. ಜನವಸತಿ ಇರುವ ಪ್ರದೇಶದಲ್ಲಿ ಸಮುದಾಯಭವನ ಬದಲು ಇಂದಿರಾ ಕ್ಯಾಂಟೀನ್ ನಿರ್ಮಿಸಲು ಪಾಲಿಕೆ ಸದಸ್ಯೆ ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೆಲ ದಿನಗಳಿಂದ ಸ್ಥಳೀಯ ಶಾಸಕ ಸುರೇಶ್‌ಕುಮಾರ್ ಹಾಗೂ ದಯಾನಂದ ವಾರ್ಡ್ ಬಿಬಿಎಂಪಿ ಬಿಜೆಪಿ ಸದಸ್ಯೆ ಕುಮಾರಿ ಪಳನಿಕಾಂತ್ ನಡುವೆ ಶೀತಲ ಸಮರ ನಡೆದಿತ್ತು. ಬಿಜೆಪಿಗೆ ಈ ವಿಚಾರದಲ್ಲಿ ತಲೆತಗ್ಗಿಸುವಂತ ಸ್ಥಿತಿ ನಿರ್ಮಾಣವಾಗಿತ್ತು.

ರಾಜಾಜಿನಗರ ವಿಧಾನಸಭೆ ಕ್ಷೇತ್ರದ ದಯಾನಂದನಗರ ವಾರ್ಡ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುವಂತೆ ಸ್ಥಳೀಯ ಕಾರ್ಪೋರೇಟರ್ ಕುಮಾರಿ ಪಳನಿಕಾಂತ್ ಹಾಗೂ ಕೆಲವರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಬಿಜೆಪಿ ಕಾರ್ಪೋರೇಟರ್ ಆಗಿರುವ ಇವರು ಈ ಭಾಗದಕ್ಕೆ ಇಂದಿರಾ ಕ್ಯಾಂಟೀನ್ ಬಂದರೆ ಅನುಕೂಲ ಎಂದು ಭಾವಿಸಿದ್ದರು. ಅಂತೆಯೇ ಸರಕಾರ ಬಿಬಿಎಂಪಿ ಮೂಲಕ ಇಲ್ಲಿ ಕ್ಯಾಂಟೀನ್ ಆರಂಭಿಸಲು ಮುಂದಾಗಿತ್ತು. ಅದಕ್ಕಾಗಿ ಮುತ್ತು ಮಾರಿಯಮ್ಮ ದೇವಸ್ಥಾನ ಹಿಂಭಾಗದ ಹಳೆಯ ಮಟನ್ ಮಾರ್ಕೆಟ್‌ನ್ನು ತೆರವುಗೊಳಿಸಿ ಕ್ಯಾಂಟೀನ್ ಕಟ್ಟಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಈ ಪ್ರಸ್ತಾವಕ್ಕೆ ಶಾಸಕ ಸುರೇಶಕುಮಾರ್ ವಿರೋಧಿಸುತ್ತಿದ್ದಾರೆ ಎನ್ನಲಾಗಿದೆ.

ಇದೀಗ ದಲಿತ ಸಮುದಾಯದವರು ಕುಮಾರಿ ವಿರುದ್ಧ ಪ್ರತಿಭಟನೆ ನಡೆಸಿದ್ದು, ಕ್ಯಾಂಟೀನ್ ಬದಲು ಸಮುದಾಯಭವನ ಬೇಕು. ಈ ವಿಚಾರದಲ್ಲಿ ಪಾಲಿಕೆ ಸದಸ್ಯೆ ರಾಜಕೀಯ ಮಾಡುತ್ತಿದ್ದಾರೆ ಎಂದು ದಲಿತ ಸಮುದಾಯದವರು ಪ್ರತಿಭಟನಾಕಾರರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News