×
Ad

ಸಾರಿಗೆ ಸಚಿವ ರೇವಣ್ಣ ಮನೆ ಮುಂದೆ ಧರಣಿ

Update: 2018-01-08 19:47 IST

ಬೆಂಗಳೂರು, ಜ.8: ಸಾರಿಗೆ ನೌಕರರಿಗೆ ಕೊಟ್ಟ ಭರಸವೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿ ಜ.18ರಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರ ಮನೆ ಮುಂದೆ ಧರಣಿ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್(ಸಿಐಟಿಯು) ತಿಳಿಸಿದೆ.

ಸೋಮವಾರ ಸಂಪಂಗಿರಾಮನಗರದಲ್ಲಿರುವ ಸಿಐಟಿಯು ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಫೆಡರೇಷನ್ ಅಧ್ಯಕ್ಷ ಎಚ್.ಡಿ.ರೇವಪ್ಪ, 2017ರ ನ.2ರಂದು ಫ್ರೀಡಂಪಾರ್ಕ್‌ನಲ್ಲಿ ನಡೆದ ಅಹೋರಾತ್ರಿ ಧರಣಿಯಲ್ಲಿ ಸಾರಿಗೆ ಸಚಿವ ರೇವಣ್ಣ ಅವರು ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಹೀಗಾಗಿ, ಮತ್ತೆ ಧರಣಿ ನಡೆಸಲಾಗುವುದೆಂದು ಹೇಳಿದರು.

ನೌಕರರನ್ನು ಬಲವಂತವಾಗಿ ವರ್ಗಾವಣೆ ಮಾಡಿರುವುದನ್ನು ರದ್ದುಪಡಿಸಬೇಕು. ಬಿಎಂಟಿಸಿ ಕಾರ್ಮಿಕರಿಗೆ 2015-16ನೆ ಸಾಲಿನ ಬೋನಸ್ ಹಣ ನೀಡಬೇಕು. ಜೊತೆಗೆ ಎರಡು ವರ್ಷಗಳಿಂದ ರಜಾ ನಗದೀಕರಣದ ಬಾಕಿ ಹಣವನ್ನು ನೀಡಿ, ಕಾನೂನು ಬಾಹಿರವಾಗಿ ಫಾರಂ-4 ತಯಾರು ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಫೆಡರೇಷನ್ ಉಪಾಧ್ಯಕ್ಷ ಪ್ರಕಾಶ್ ಕೆ.ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News