ದರವೇಶಿ, ಬುಡುಬುಡುಕೆಯವರಿಗೆ ವಸತಿ ಸೌಲಭ್ಯ ಕಲ್ಪಿಸಲು ಆಗ್ರಹ

Update: 2018-01-08 14:47 GMT

ಬೆಂಗಳೂರು, ಜ. 8: ಬುಡುಬುಡುಕೆ, ದರವೇಶಿ ಸಮುದಾಯದವರು ಸೇರಿದಂತೆ ನಗರದ ಕೊಳಗೇರಿ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಇಲ್ಲಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಡುಗಡೆಯ ಚಿರತೆ ಸಂಘಟನೆ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಸೋಮವಾರ ಇಲ್ಲಿನ ಕೆಂಪೇಗೌಡ ರಸ್ತೆಯಲ್ಲಿನ ಕಂದಾಯ ಭವನದ ಹಿಂಭಾಗದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಬಳಿಕ ಬುಡುಬುಡುಕೆಯವರು ಬುಡುಬುಡುಕೆ ಮತ್ತು ದರವೇಶಿಗಳು ತಮ್ಮ ತಮಟೆಗಳೊಂದಿಗೆ ಧರಣಿ ನಡೆಸಿದ್ದು ವಿಶೇಷವಾಗಿತ್ತು.

ಧರಣಿಯ ನೇತೃತ್ವ ವಹಿಸಿದ್ದ ವಿಸಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ ಮಾತನಾಡಿ, ಇಲ್ಲಿನ ಕಾಚರಕನಹಳ್ಳಿ, ದೇವರಜೀವನಹಳ್ಳಿ ಮೋದಿ ರಸ್ತೆಯ ಕೆರೆ ಅಂಗಳ, ಕೊಳಚೆ ಪ್ರದೇಶದಲ್ಲಿ ಹತ್ತಾರು ವರ್ಷಗಳಿಂದ ವಾಸ ಮಾಡುತ್ತಿರುವ ಬುಡಬುಡಿಕೆ, ದರವೇಶಿಗಳನ್ನು ಬೀದಿಪಾಲು ಮಾಡಲಾಗಿದೆ ಎಂದು ಆರೋಪಿಸಿದರು.

ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸಿದ್ದು, ಆ ಪ್ರದೇಶದಲ್ಲಿ ಬುಡುಬುಡುಕೆ, ದರವೇಶಿ ಸೇರಿ ವಸತಿ ರಹಿತ ಬಡವರಿಗೆ ಹಂಚಿಕೆ ಮಾಡಬೇಕು. ಇನ್ನೂ ಹದಿನೈದು ದಿನಗಳ ಒಳಗಾಗಿ ಈ ಸಮುದಾಯಗಳಿಗೆ ವಸತಿ ಸೌಲಭ್ಯ ಕಲ್ಪಿಸದಿದ್ದರೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಾುವುದು ಎಂದು ಎಚ್ಚರಿಕೆ ನೀಡಿದರು.

ಅನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ವಿಸಿಕೆ ರಾಜ್ಯ ಕಾರ್ಯದರ್ಶಿ ಎಂ.ಎಸ್.ಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ವೈಟ್‌ಫೀಲ್ಡ್ ರತ್ನ, ಲಿಂಗರಾಜಪುರದ ರಾಜೇಶ್ವರಿ ಸೇರಿದಂತೆ ಸಂಘಟನೆು ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News