ಡೋಪಿಂಗ್ ನಿಯಮ ಉಲ್ಲಂಘನೆ: ಯೂಸುಫ್ ಪಠಾಣ್ 5 ತಿಂಗಳು ಅಮಾನತು

Update: 2018-01-09 09:42 GMT

ಹೊಸದಿಲ್ಲಿ, ಜ.9: ಡೋಪಿಂಗ್ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಬಿಸಿಸಿಐ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು 5 ತಿಂಗಳ ಕಾಲ ಅಮಾನತು ಮಾಡಿದೆ.

ಕೆಮ್ಮಿನ ಸಿರಪ್ ಗಳಲ್ಲಿ ಸಾಮಾನ್ಯವಾಗಿ ಇರುವ ನಿಷೇಧಿತ ವಸ್ತುವನ್ನು ಸೇವಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಜನವರಿ 27 ಮತ್ತು 28ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಯೂಸುಫ್ ಇರಲಿದ್ದಾರೆ.

2017 ಮಾರ್ಚ್ 16ರ ಸಂದರ್ಭ ಬಿಸಿಸಿಐ ಡೋಪಿಂಗ್ ಪರೀಕ್ಷೆಗಾಗಿ ಆಟಗಾರರ ಮೂತ್ರದ ಸ್ಯಾಂಪಲ್ ಗಳನ್ನು ಪರೀಕ್ಷಿಸಿತ್ತು. ಯೂಸುಫ್ ಅವರ ಮೂತ್ರದಲ್ಲಿ ಟರ್ಬುಟಲೈನ್ ಅಂಶವಿರುವುದು ಪತ್ತೆಯಾಗಿತ್ತು” ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 2017ರ ಆಗಸ್ಟ್ 15ರಿಂದ ಅಮಾನತು ಪುನರಾವರ್ತನೆಯಾಗಲಿದ್ದು, ಜನವರಿ 14ರಂದು ಅವಧಿ ಮುಕ್ತಾಯಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News