ಕೆ ಸಿ ಎಫ್ ಬಹರೈನ್: ರಾಹುಲ್ ಗಾಂಧಿ, ಡಾ.ಆರತಿ ಕೃಷ್ಣ ಭೇಟಿ, ಮನವಿ ಸಲ್ಲಿಕೆ

Update: 2018-01-10 05:46 GMT

ಬಹರೈನ್, ಜ.10: ಜಾಗತಿಕ ಮಟ್ಟದಲ್ಲಿ ಗಲ್ಫ್ ರಾಷ್ಟಗಳ ಪ್ರವಾಸ ಹಾಗೂ ಭಾರತೀಯ ಮೂಲದವರಿಂದ ಸ್ಥಾಪಿತವಾದ ಜಾಗತಿಕ ಸಂಘಟನೆ ( GOPIO - Global Oraganisation Of People Of Indian Origin) ಆಯೋಜಿಸಿದ ಸಮ್ಮೇಳನದಲ್ಲಿ ಭಾಗವಹಿಸಲು ಬಹರೈನ್ ಗೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಡಾ. ಆರತಿ ಕೃಷ್ಣ  ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳನ್ನು ಅನಿವಾಸಿ ಕನ್ನಡಿಗರ ಸಂಘಟನೆ ಬಹರೈನ್ ಕೆ ಸಿ ಎಫ್ ನಿಯೋಗವು ಭೇಟಿ ನೀಡಿ,  ಕೆ ಸಿ ಎಫ್ ಬಹರೈನ್  ಪರಿಚಯ ಹಾಗೂ  ಕಾರ್ಯಚಟುವಟಿಕೆಯನ್ನು ವಿವರಿಸಿದರು.

ಈ ಸಂದರ್ಭ ನಿಯೋಗವು ಅನಿವಾಸಿ ಕನ್ನಡಿಗರ ಸಮಸ್ಯೆಯನ್ನು ಹಾಗೂ ಬೇಡಿಕೆಯನ್ನು ಮನವಿ ಮೂಲಕ ಸಲ್ಲಿಸಿದರು.

ನಿಯೋಗದಲ್ಲಿ ಕೆ ಸಿ ಎಫ್ ಬಹರೈನ್ ಐ ಎನ್ ಸಿ ನೇತಾರರಾದ  ಅಲಿ ಮುಸ್ಲಿಯಾರ್, ಜಮಾಲುದ್ದೀನ್ ವಿಠ್ಠಲ್  ಕೆ ಸಿ ಎಫ್ ನೇತಾರರಾದ ಬಶೀರ್ ಕಾರ್ಲೇ, ಹನೀಫ್ ಕಿನ್ಯಾ , ಮಜೀದ್ ಮಾದಾಪುರ , ಕರೀಮ್ ಉಚ್ಚಿಲ, ಹನೀಫ್ ಗುರುವಾಯನಕೆರೆ, ಇಕ್ಬಾಲ್ ಮಂಜನಾಡಿ ಹಾಗೂ ಸಮದ್ ಉಜಿರೆಬೆಟ್ಟು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News