×
Ad

ವರ್ಷದ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ವಿತರಣೆ

Update: 2018-01-10 21:06 IST

ಬೆಂಗಳೂರು, ಜ. 10: ನೂತನ ವರ್ಷದಂದು ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ 5 ಲಕ್ಷ ರೂ.ಗಳ ಚೆಕ್ ವಿತರಣೆ ಮಾಡಿದರು.

ಹೊಸವರ್ಷ 2018ರ ಮಧ್ಯರಾತ್ರಿ 12:05 ಸುಮಾರಿಗೆ ರಾಜಾಜಿನಗರ ನಿವಾಸಿಗಳಾದ ಗೋಪಿ ಮತ್ತು ಪುಷ್ಪ ದಂಪತಿಗೆ ಹೆಣ್ಣು ಮಗು ಜನನವಾಗಿತ್ತು. ಮರು ದಿನವೇ ಆಸ್ಪತ್ರೆಗೆ ಭೇಟಿ ನೀಡಿ ತಾಯಿ-ಮಗುವಿನ ಆರೋಗ್ಯ ವಿಚಾರಿಸಿದ ಮೇಯರ್ ಸಂಪತ್‌ರಾಜ್ ಮೊದಲ ಹೆಣ್ಣು ಮಗುವಿನ ಪ್ರಮಾಣ ಪತ್ರ ವಿತರಿಸಿದ್ದರು. ಆ ಹಿನ್ನೆಲೆಯಲ್ಲಿ ಬುಧವಾರ ಬಿಎಂಆರ್‌ಡಿಎ ಕಚೇರಿಯಲ್ಲಿ ಮಗುವಿನ ತಾಯಿ ಪುಷ್ಪ ಅವರಿಗೆ ಸಚಿವ ಕೆ.ಜೆ.ಜಾರ್ಜ್ ಚೆಕ್ ವಿತರಿಸಿದರು.
ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಜಾಗೃತಿ ಮೂಡಿಸಲು ಬಿಬಿಎಂಪಿ ಮೇಯರ್ ಆರ್.ಸಂಪತ್‌ರಾಜ್, ಡಿಸೆಂಬರ್ 31ರ ರಾತ್ರಿ 12 ಗಂಟೆಯಿಂದೀಚೆಗೆ ಪಾಲಿಕೆಯ ಹೆರಿಗೆ ಆಸ್ಪತ್ರೆಗಳಲ್ಲಿ ಸಹಜವಾಗಿ ಜನಿಸುವ ಮೊದಲ ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕಾಗಿ ಐದು ಲಕ್ಷ ರೂ. ನೀಡುವುದಾಗಿ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಘೋಷಿಸಿದ್ದರು.

ಈ ವೇಳೆ ಮೇಯರ್ ಸಂಪತ್‌ರಾಜ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಆಡಳಿತ ಪಕ್ಷ ನಾಯಕ ಮುಹಮ್ಮದ್ ರಿಝ್ವಿನ್ ನವಾಬ್ ಸೇರಿ ಪ್ರಮುಖರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News