ಇಂಗ್ಲೆಂಡ್ ತಂಡಕ್ಕೆ ಬೆನ್ ಸ್ಟೋಕ್ಸ್ ವಾಪಸ್

Update: 2018-01-11 19:06 GMT

ಸಿಡ್ನಿ, ಜ.11: ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನ್ಯೂಝಿಲೆಂಡ್‌ಗೆ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್‌ನ 16 ಸದಸ್ಯರನ್ನೊಳಗೊಂಡ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ವೇಗದ ಬೌಲರ್ ಮಾರ್ಕ್ ವುಡ್ ತಂಡಕ್ಕೆ ವಾಪಸಾಗಿದ್ದಾರೆ. ಆ್ಯಶಸ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಮೊಯಿನ್ ಅಲಿ, ಜೇಮ್ಸ್ ವಿನ್ಸಿ ಹಾಗೂ ಮಾರ್ಕ್ ಸ್ಟೋನ್‌ಮನ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿದ್ದ ಗ್ಯಾರಿ ಬ್ಯಾಲನ್ಸ್, ಜಾಕ್ ಬಾಲ್ ಹಾಗೂ ಟಾಮ್ ಕುರ್ರನ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

   ಇಂಗ್ಲೆಂಡ್ ತಂಡ ನ್ಯೂಝಿಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ಟ್ ಸರಣಿಯನ್ನು ಆಡಲಿದೆ. ಮಾ.22 ರಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇಂಗ್ಲೆಂಡ್ ಇತ್ತೀಚೆಗೆ ಸಿಡ್ನಿಯಲ್ಲಿ ಕೊನೆಗೊಂಡ ಆಸೀಸ್ ವಿರುದ್ಧದ ಆ್ಯಶಸ್ ಸರಣಿಯಲ್ಲಿ 0-4 ಅಂತರದಿಂದ ಸೋತಿತ್ತು. 3 ತಿಂಗಳ ಹಿಂದೆ ಬ್ರಿಸ್ಟೊಲ್‌ನ ನೈಟ್‌ಕ್ಲಬ್ ಹೊರಗೆ ರಾತ್ರಿ ವೇಳೆ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ವಿಚಾರಣೆ ಎದುರಿಸುತ್ತಿರುವ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ನಿಷೇಧ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆಸ್ಟ್ರೇಲಿಯ ವಿರುದ್ಧದ ಆ್ಯಶಸ್ ಸರಣಿಯಿಂದ ವಂಚಿತರಾಗಿದ್ದರು.

ನ್ಯೂಝಿಲೆಂಡ್ ಸಂಜಾತ ಸ್ಟೋಕ್ಸ್ ತನ್ನ ತವರುಪಟ್ಟಣದಲ್ಲಿ ಕ್ಯಾಂಟರ್‌ಬರಿ ತಂಡದಲ್ಲಿ ಆಡಿದ್ದರು.

ಇಂಗ್ಲೆಂಡ್ ಕ್ರಿಕೆಟ್ ತಂಡ

ಜೋ ರೂಟ್(ನಾಯಕ), ಮೊಯಿನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಜಾನಿ ಬೈರ್‌ಸ್ಟೊವ್, ಸ್ಟುವರ್ಟ್ ಬ್ರಾಡ್, ಅಲಿಸ್ಟರ್ ಕುಕ್, ಮಾಸನ್ ಕ್ರೇನ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಕ್ರೆಗ್ ಒವರ್ಟನ್, ಬೆನ್ ಸ್ಟೋಕ್ಸ್, ಮಾರ್ಕ್ ಸ್ಟೋನ್‌ಮನ್, ಜೇಮ್ಸ್ ವಿನ್ಸಿ, ಕ್ರಿಸ್ ವೋಕ್ಸ್ ಹಾಗೂ ಮಾರ್ಕ್‌ವುಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News